ಉಡುಪಿಯಲ್ಲಿ ಪ್ರತ್ಯಕ್ಷವಾದ ಭೀಮ ಗಾತ್ರದ ಹೆಬ್ಬಾವು

ಮಂಗಳೂರು ನವೆಂಬರ್ 15: ಭಾರೀ ಗಾತ್ರದ ಹೆಬ್ಬಾವೊಂದು ಉಡುಪಿಯಲ್ಲಿ ಇಂದು ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಡಿನಲ್ಲಿರುವ ಹಾವುಗಳು ನಗರ ಪ್ರದೇಶಕ್ಕೆ ಆಹಾರ ಹುಡುಕಿ ಬರುತ್ತಿರುವುದು ಸಾಮಾನ್ಯವಾಗಿದೆ. ನಗರ ವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಉಡುಪಿಯ ಕುಕ್ಕಿಕಟ್ಟೆಯಲ್ಲಿ ಇಂದು ಮುಂಜಾನೆ ಈ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು. ಭೀಮ ಗಾತ್ರದ ದಷ್ಟ ಪುಷ್ಟ ಹೆಬ್ಬಾವು ಆಹಾರ ಹುಡುಕಿಕೊಂಡು ಕಾಡಿನಿಂದ ನಗರ ಪ್ರವೇಶ ಮಾಡಿತ್ತು.

ಸುಮಾರು ಏಳು ಅಡಿ ಉದ್ದದ ೩೦ಕೆಜಿ ತೂಕ ಭಾರದ ಹೆಬ್ಬಾವು ಶ್ರೀ ಕಾಂತ್ ಉಪಾಧ್ಯಾಯ ಅವರ ಮನೆಯ ಆವರಣದಲ್ಲಿ ಕಾಣಿಸಿಕೊಂಡಿತ್ತು. ಅಪರೂಪಕ್ಕೆ ಕಾಣ ಸಿಗುವ ಹೆಬ್ಬಾವು ನೋಡುವುದಕ್ಕೆ ನೂರಾರು ಜನ ಸೇರಿದ್ದರು.

ಸುಂದರ ಹೆಬ್ಬಾವಿನೊಂದಿಗೆ ಸ್ಪೆಲ್ಫಿ ಕ್ಲಿಕಿಸುವುದಕ್ಕೆ ಸ್ಥಳೀಯರು ಮುಗಿಬಿದ್ದರು. ಕೆಲವರು ಹೆಬ್ಬಾವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಹಲವರು ಹಾವನ್ನು ಮುಟ್ಟಿ ಖುಷಿ ಪಟ್ಟರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ರಕ್ಷಿತ ಅರಣ್ಯಕ್ಕೆ ರವಾನಿಸಿದ್ದಾರೆ.

VIDEO

5 Shares

Facebook Comments

comments