Connect with us

    BANTWAL

    ಬಂಟ್ವಾಳ – ಚುನಾವಣಾ ಪ್ರಚಾರದ ವೇಳೆ ಹೃದಯಾಘಾತದಿಂದ ಬಿಜೆಪಿ ಕಾರ್ಯಕರ್ತ ನಿಧನ

    ಬಂಟ್ವಾಳ ಮೇ 05: ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿ ಮತಯಾಚನೆ ನಡೆಸುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಎಂಬಲ್ಲಿ ನಡೆದಿದೆ.


    45 ವರ್ಷದ ಪ್ರವೀಣ್ ಚಂದ್ರ ನಾಯಕ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ವೃತ್ತಿಯಲ್ಲಿ ಛಾಯಗ್ರಾಹಕನಾಗಿದ್ದು, ಬಿಜೆಪಿಯ ಕ್ರಿಯಾಶೀಲ ಕಾರ್ಯಕರ್ತನಾಗಿದ್ದರು. ಪ್ರಗತಿ ಪರ ಕೃಷಿಕನಾಗಿಯೂ ಗುರುತಿಸಿಕೊಂಡಿದ್ದ ಪ್ರವೀಣ್ ಅವರು ಇಂದು ಚುನಾವಣಾ ಪ್ರಚಾರದ ವೇಳೆ ತಲೆ ಸುತ್ತು ಕಂಡು ನೆಲಕ್ಕೆ ಬಿದ್ದಿದ್ದಾರೆ ಎಂದು ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ

    Share Information
    Advertisement
    Click to comment

    You must be logged in to post a comment Login

    Leave a Reply