Connect with us

  FILM

  ದಿ ಕೇರಳ ಸ್ಟೋರಿ…ಐಸಿಸ್ ಸಂಘಟನೆ ವಿರುದ್ದ ಇರುವ ಕಥೆ – ತಡೆ ನೀಡಲು ನಿರಾಕರಿಸಿದ ಕೇರಳ ಹೈಕೋರ್ಟ್

  ಕೇರಳ ಮೇ 05: ಭಾರಿ ವಿವಾದ ಸೃಷ್ಠಿಸಿದ್ದ ದಿ ಕೇರಳ ಸ್ಟೋರಿ ಚಿತ್ರದ ಬಿಡುಗಡೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಚಿತ್ರದಲ್ಲಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದೇನಿದೆ? ಧರ್ಮದ ವಿರುದ್ಧ ಯಾವುದೇ ಆರೋಪವಿಲ್ಲ. ಇದರಲ್ಲಿ ಇರುವುದು ಐಸಿಸ್‌ ಸಂಘಟನೆಯ ವಿರುದ್ಧ ಮಾತ್ರ. ಹೀಗಾಗಿ, ಇದರಲ್ಲಿ ಧಾರ್ಮಿಕ ವಿಚಾರಗಳು ಇಲ್ಲ ಅಭಿಪ್ರಾಯಪಟ್ಟಿದೆ.

  ದೇಶದಲ್ಲಿ ಇಂದು ಬಿಡುಗಡೆಯಾಗಿರುವ ಲವ್ ಜಿಹಾದ್ ವಿಚಾರಕ್ಕೆ ಸಂಬಂಧಿಸಿದ ದಿ ಕೇರಳ ಸ್ಟೋರಿ ಚಿತ್ರದ ಬಿಡುಗಡೆಗೆ ತಡೆಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಿಚಾರಣೆಯನ್ನು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎನ್ ನಾಗರೇಶ್ ಮತ್ತು ನ್ಯಾಯಮೂರ್ತಿ ಸೋಫಿ ಥಾಮಸ್ ಅವರ ವಿಭಾಗೀಯ ಪೀಠವು ನಡೆಸಿದ್ದು, ಚಲನಚಿತ್ರವು “ನಿಜವಾದ ಘಟನೆಗಳಿಂದ ಪ್ರೇರಿತವಾಗಿದೆ” ಎಂದು ಮಾತ್ರ ಹೇಳುತ್ತದೆ ಎಂದು ಗಮನಿಸಿದ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಚಲನಚಿತ್ರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರಮಾಣೀಕರಿಸಿದೆ ಎಂದು ನ್ಯಾಯ ಪೀಠ ಹೇಳಿದೆ.


  ನ್ಯಾಯಪೀಠವು ದಿ ಕೇರಳ ಸ್ಟೋರಿ ಚಿತ್ರವನ್ನು ನೋಡುವ ಮೊದಲು ಟ್ರೇಲರ್‌ ಆಧಾರದಲ್ಲಿ ಅದರ ಪ್ರದರ್ಶನವನ್ನು ತಡೆಯಲು ನಿರಾಕರಿಸಿದೆ. ಟ್ರೇಲರ್‌ನಲ್ಲಿ ನಿರ್ದಿಷ್ಟ ಸಮುದಾಯದ ಮೇಲೆ ಆಕ್ರಮಣಕಾರಿ ವಿಚಾರವೇನು ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯಾವುದೇ ಅರ್ಜಿದಾರರು ಚಲನಚಿತ್ರವನ್ನು ವೀಕ್ಷಿಸಿಲ್ಲ ಮತ್ತು ನಿರ್ಮಾಪಕರು ಚಲನಚಿತ್ರವು ಕಾಲ್ಪನಿಕ ಆವೃತ್ತಿ ಎಂದು ಹಕ್ಕು ನಿರಾಕರಣೆ ಸೇರಿಸಿದ್ದಾರೆ ಎಂದು ಪೀಠವು ಗಮನಿಸಿದೆ. “ಇದನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯುತ್ತಾರೆ. ಅವರಿಗೆ ಕಲಾತ್ಮಕ ಸ್ವಾತಂತ್ರ್ಯವಿದೆ. ಇದು ಸಮತೋಲದಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಕೆಲಸ” ಎಂದು ನ್ಯಾಯಮೂರ್ತಿ ನಾಗರೇಶ್ ಅವರ ಹೇಳಿಕೆಯನ್ನು ಲೈವ್ ಲಾ ಉಲ್ಲೇಖಿಸಿದೆ.
  “ಚಿತ್ರದಲ್ಲಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದೇನಿದೆ? ಧರ್ಮದ ವಿರುದ್ಧ ಯಾವುದೇ ಆರೋಪವಿಲ್ಲ. ಇದರಲ್ಲಿ ಇರುವುದು ಐಸಿಸ್‌ ಸಂಘಟನೆಯ ವಿರುದ್ಧ ಮಾತ್ರ. ಹೀಗಾಗಿ, ಇದರಲ್ಲಿ ಧಾರ್ಮಿಕ ವಿಚಾರಗಳು ಇಲ್ಲ” ಎಂದು ನ್ಯಾಯಮೂರ್ತಿ ನಾಗರೇಶ್‌ ಅಭಿಪ್ರಾಯಪಟ್ಟಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply