LATEST NEWS
ತುಂಡು ರಾಜಕಾರಣಿಯಿಂದಾಗಿ ಕೈ ತಪ್ಪಿದ ಟಿಕೆಟ್ – ವಿಜಯ್ ಕುಮಾರ್ ಶೆಟ್ಟಿ

ತುಂಡು ರಾಜಕಾರಣಿಯಿಂದಾಗಿ ಕೈ ತಪ್ಪಿದ ಟಿಕೆಟ್ – ವಿಜಯ್ ಕುಮಾರ್ ಶೆಟ್ಟಿ
ಮಂಗಳೂರು ಏಪ್ರಿಲ್ 25: ತಮಗೆ ನೀಡಬೇಕಾದ ಸ್ಥಾನಮಾನದ ಕುರಿತು ಭರವಸೆ ನೀಡುವವರೆಗೂ ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಇಂದು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಪಕ್ಷದ ಕೆಲ ತುಂಡು ರಾಜಕಾರಣಿಗಳಿಂದಾಗಿ ನನಗೆ ಟಿಕೆಟ್ ಕೈ ತಪ್ಪಿತ್ತು, ಆದರೆ ಈ ಬಾರಿ ಪಕ್ಷ ಟಿಕೆಟ್ ನೀಡಬಹುದೆಂಬ ಆಶಾ ಭಾವನೆಯಲ್ಲಿದ್ದೆ ಆದರೆ ಮತ್ತೆ ಅದೇ ತುಂಡು ರಾಜಕಾರಣಿಯಿಂದಲೇ ನನಗೆ ಟಿಕೆಟ್ ಕೈ ತಪ್ಪಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿದ್ದಾರೆ ರಾಹುಲ್ ಗಾಂಧಿ ಮಂಗಳೂರಿಗೆ ಬಂದು ತಮಗೆ ನೀಡಬೆಕಾದ ಸ್ಥನ ಮಾನ ಕುರಿತು ಭರವಸೆ ನೀಡುವ ವರೆಗೂ ಚುನಾವಣಾ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಆದರೆ ಈ ಹಿಂದೆ ಪಕ್ಷ ನನಗೆ ಎಂಎಲ್ ಸಿ ಸ್ಥಾನ ನೀಡುವ ಆಶ್ವಾಸನೆ ನೀಡಿದಂತೆ ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಎಂ ಎಲ್ ಸಿ ಹುದ್ದೆಯನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು. ಇದೇ ಬರುವ ಏಪ್ರಿಲ್ 27 ರಂದು ರಾಹುಲ್ ಗಾಂಧಿ ಮಂಗಳೂರಿಗೆ ಭೇಟಿ ನೀಲಿದ್ದಾರೆ ಈ ಸಂದರ್ಭದಲ್ಲಿ ಅವರನ್ನು ಬೇಟಿ ಮಾಡಲಿದ್ದೆನ ಏಪ್ರಿಲ್ 27ರಂದು ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಸುವ ಅಶ್ವಾಸನೆ ನೀಡಿದ್ದಾರೆ. ಆ ಮಾತುಕತೆಯ ಬಳಿಕ ಚುನಾವಣೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.