Connect with us

    KARNATAKA

    ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್‌ಗೆ HDK ಕಂಗಾಲ್..! ಡಿಢೀರ್ ಸುದ್ದಿಗೋಷ್ಟಿ ಕರೆದ H D ಕುಮಾರ ಸ್ವಾಮಿ..!

    ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ  ಮುಡಾ ಹಗರಣದಿಂದ ಒಂದೆಡೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ರೆ ಅತ್ತ ಸರ್ಕಾರದ ವಿರುದ್ದ ಸಮರ ಸಾರಿದ ಪ್ರತಿಪಕ್ಷಗಳನ್ನು ಸದ್ದಡಗಿಸಲು ಸರ್ಕಾರ ಮಟ್ಟದಲ್ಲೇ ಭಾರಿ ಪ್ರಯತ್ನಗಳು ನಡೆದಿವೆ. ಅದರಲ್ಲಿ ಮಾಜಿ  ಸಿಎಂ, ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅವರ ಹಳೇ ಮೈನಿಂಗ್ ಕೇಸ್ ಫೈಲನ್ನು ದಾಳವಾಗಿ ಸರ್ಕಾರ ಉಪಯೋಗಿಸಿದ್ದು ಸಿದ್ದು ಸರ್ಕಾರದ ಮಾಸ್ಟರ್  ಸ್ಟ್ರೋಕ್‌ನಿಂದ  ಹೆಚ್‌ ಡಿ ಕುಮಾರ ಸ್ವಾಮಿ ಕಂಗಾಲಾಗಿದ್ದು ಇದು ರಾಜ್ಯ ಸರ್ಕಾರದ ಸೇಡಿನ ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ  ಮಾತನಾಡಿ ಸರ್ಕಾರದ ಭ್ರಷ್ಟಾಚಾರ ಬಗ್ಗೆ ವಿರುದ್ಧ ಮಾತನಾಡುತ್ತಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದ್ದು ಒಂದು ದಿನವಾದರೂ ಜೈಲಿಗೆ ಹಾಕಿಸಬೇಕು ಅಂತ ನನ್ನ ಸಹಿ ತಿರುಚಿರುವ ದಾಖಲಾತಿಗಳನ್ನ ಇಟ್ಟುಕೊಂಡು ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಕ್ಕೆ ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.ಸಿದ್ದರಾಮಯ್ಯ ಸರ್ಕಾರ ನನ್ನ ವಿರುದ್ದ ಷಡ್ಯಂತ್ರ ಮಾಡುತ್ತಿದೆ. ನನ್ನನ್ನ ಒಂದು ದಿನವಾದರೂ ಜೈಲಿಗೆ ಹಾಕಲು ಪ್ಲ್ಯಾನ್ ನಡೆಯುತ್ತಿದೆ. ಸಾಯಿ ವೆಂಕಟೇಶ್ವರ ಮೈನಿಂಗ್ ಕೇಸ್ ನಲ್ಲಿ ನನ್ನ ಸಹಿಯನ್ನೇ ನಕಲು ಮಾಡಿದ್ದಾರೆ. ನಾನು ಸಹಿ ಮಾಡದೇ ಹೋದರೂ ನನ್ನ ಸಹಿ ಅಂತ ಕೇಸ್ ನಡೆಯುತ್ತಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ನನ್ನ ಮೇಲೆ ಕ್ರಮಕ್ಕೆ ಮುಂದಾಗಿದ್ದು, ಇದು ರಾಜ್ಯ ಸರ್ಕಾರದ ಸೇಡಿನ ರಾಜಕೀಯ ಎಂದು ಕಿಡಿಕಾರಿದ್ದಾರೆ. ಸಾಯಿ ವೆಂಕಟೇಶ್ವರ ಮಿನರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) 2017 ರಲ್ಲಿ 3 ತಿಂಗಳ ಒಳಗೆ ಎಸ್‌ಐಟಿ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಈ ಸರ್ಕಾರ 2024 ಆದರೂ ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ ಮಾಡಿಲ್ಲ. ಅದನ್ನು ಬಿಟ್ಟು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ ಎಂದು ಎಸ್‌ಐಟಿ ಮೂಲಕ ಪತ್ರ ಬರೆಸಿ ಹೇಗಾದರೂ ಮಾಡಿ ನನ್ನನ್ನ ಸಿಲುಕಿಸಬೇಕು ಎಂದು ಪ್ಲ್ಯಾನ್‌ ಮಾಡಿದೆ. 2017 ರಿಂದಲೂ ನನ್ನನ್ನ ಜೈಲಿಗೆ ಹಾಕಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರ ವಿರುದ್ದ ನಾನು ಮಾತಾಡಿದ್ದಕ್ಕೆ ನನ್ನ ವಿರುದ್ದ ಕುತಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು.

    Share Information
    Advertisement
    Click to comment

    You must be logged in to post a comment Login

    Leave a Reply