DAKSHINA KANNADA
ಬೆಳ್ತಂಗಡಿ ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ – ಕೊಲೆ ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ – ಎಸ್ಪಿ
ಪುತ್ತೂರು ಅಗಸ್ಟ್ 21: ಬೆಳ್ತಂಗಡಿ ತಾಲೂಕಿನ ಬೆಳಾಲು ನಲ್ಲಿ ನಿವೃತ್ತ ಶಿಕ್ಷಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್. ಎನ್ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿಯ ಬೆಳಾಲು ಗ್ರಾಮದ ಎಸ್‌ಪಿಬಿ ಕಂಪೌಂಡ್ ನಲ್ಲಿ ಮನೆ ಅಂಗಳದಲ್ಲಿಯೇ ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಭಟ್(73) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಮನೆ ಪಕ್ಕದಲ್ಲೇ ಶಿಕ್ಷಕನನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ,
ಘಟನೆ ನಡೆದ ಬಳಿಕ ಪೋಲೀಸರು ಕೊಲೆಯಾದ ವ್ಯಕ್ತಿಯ ಮನೆಯನ್ನು ಶೋಧಿಸಿದ್ದಾರೆ, ಆದರೆ ಮನೆಯಲ್ಲಿ ಯಾವುದೇ ಕಳ್ಳತನ ಅಥವಾ ಬೇರೆ ಯಾವುದೇ ಪ್ರಯತ್ನಗಳು ನಡೆದ ಬಗ್ಗೆ ಸುಳಿವು ದೊರೆತಿಲ್ಲ ಎಂದರು. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್. ಎನ್ ಮಾಹಿತಿ ನೀಡಿದ್ದಾರೆ.
You must be logged in to post a comment Login