Connect with us

LATEST NEWS

ಪ್ರಚೋದನಕಾರಿಯಾಗಿ ಭಾಷಣ ಮಾಡುವವರ ಮೇಲೆ ಎಫ್ಐಆರ್ ಆದ್ರೂ ಬೇಗ ಬೇಲ್ ಸಿಗ್ತಾ ಇದೆ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು ಮೇ 31: ಪ್ರಚೋದನಕಾರಿ ಭಾಷಣ ಮಾಡೋರನ್ನ ಕೆಲ ಸಂಘಟನೆಗಳು ರಕ್ಷಣೆ ಮಾಡ್ತಿದೆ, ಅವರಿಗೆ ಲಾಯಾರ್ಸ್ ಕೊಡ್ತಾರೆ, ಜಡ್ಜಸ್ ಹತ್ತಿರ ಮಾತನಾಡಿಸ್ತಾರೆ. ಎಫ್ಐಆರ್ ಆದರೂ ಅವರಿಗೆ ಸುಲಭವಾಗಿ ಬೇಲ್ ಸಿಗ್ತಾ ಇದೆ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ಕೋಮು ಭಾಷಣಗಳನ್ನ ಹತ್ತಿಕ್ಕಲು ಒಂದು ಕಾನೂನು ರೂಪಿಸಬೇಕು, ಯತ್ನಾಳ್ ಹಾಗೂ ಈ ಜಿಲ್ಲೆಯ ಶಾಸಕರು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್ ಐ ಆರ್ ಆದರೂ ಕೂಡಲೇ ಬೇಲ್ ಆಗುತ್ತೆ. ಅವರ ಬಳಿ ಲಾಯರ್ ಇದೆ, ಜಡ್ಜ್ ಹತ್ರ ಮಾತನಾಡಿಸ್ತಾರೆ. ಈ ರೀತಿ ಕೇಸ್ ಆದರೂ ಅವರಿಗೆ ಸಂಘಟನೆಯ ಬೆಂಬಲ ಇದೆ, ರಾಜಕೀಯ ರಕ್ಷಣೆಯೂ ಇದೆ ಎಂದರು.

ಬಜಪೆ ಚಲೋ ವಿಚಾರದಲ್ಲಿ ಪೊಲೀಸರು ಸ್ಟ್ರಿಕ್ಟ್ ಆಗಿ ಇರಬೇಕಾಗಿತ್ತು, ಈಗಾಗಲೇ ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ. ಮಂಗಳೂರು ಉಡುಪಿ ಶಿವಮೊಗ್ಗಕ್ಕೆ ರಚನೆ ಆಗೋದಕ್ಕೆ ಆದೇಶ ಆಗಿದೆ. ಎಲ್ಲ ಕಾನೂನು ಬಾಹಿರ ಚಟುವಟಿಕೆಗೆ ಇತಿಶ್ರೀ ಹಾಡುತ್ತೇವೆ ಎಂದರು. ಕೋಮುಗಲಭೆ, ಕೋಮುಭಾವನೆಯನ್ನ ಕೆರಳಿಸುವವರು ಅಪರಾಧಿ ಚಟುವಟಿಕೆಯಲ್ಲಿ ಭಾಗಿಯಾದವರು. ಯಾವುದೇ ಸಂಘಟನೆಯನ್ನ ಬ್ಯಾನ್ ಮಾಡೋದಕ್ಕೆ ನಮಗೆ ಅಧಿಕಾರವಿಲ್ಲ ಎಂದರು.

 

ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಂ ಸಮುದಾಯದವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅದು ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಯಾರು ರಾಜೀನಾಮೆ ಕೊಡುತ್ತಾರೆ, ಯಾರು ರಾಜೀನಾಮೆ ಕೊಡುವುದಿಲ್ಲ, ಇದು ನೇರವಾಗಿ ನನ್ನ ಅಡಿಯಲ್ಲಿ ಬರುವ ವಿಚಾರವಲ್ಲ’ ಎಂದರು.

ಅಬ್ದುಲ್ ರಹಿಮಾನ್ ಕೊಲೆ ನಡೆದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಕೆಲವರು ಕಾಂಗ್ರೆಸ್ ಮುಖಂಡರು ಆಗ್ರಹ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜೀನಾಮೆ ಕೇಳಿದ್ದು ಅವರು ಅಭಿಪ್ರಾಯ, ಯಾವಾಗ ಎಲ್ಲಿ ಬರಬೇಕು ಎಂಬುದನ್ನು ಪರಿಸ್ಥಿತಿ ನೋಡಿ ನಾವು ತೀರ್ಮಾನಿಸುತ್ತೇವೆ. ಅಶ್ರಫ್ ಮೃತಪಟ್ಟಾಗ ಕೆಲವರಿಗೆ ಆಕ್ರೋಶ ಆಗುತ್ತದೆ, ಸುಹಾಸ್ ಶೆಟ್ಟಿ ಮೃತಪಟ್ಟಾಗ ಇನ್ನು ಕೆಲವರಿಗೆ ಆಕ್ರೋಶ ಆಗುತ್ತದೆ. ಈ ಆಕ್ರೋಶ ಅವರವರ ಸಮುದಾಯದವರು ಮೃತಪಟ್ಟಾಗ ಮಾತ್ರ ಆಗುತ್ತದೆ. ನಮಗೆ ಯಾರೇ ಮೃತಪಟ್ಟರೂ ಆಕ್ರೋಶವಾಗುತ್ತದೆ. ನಮಗೆ ಎಲ್ಲ ಪಕ್ಷ, ಸಂಘಟನೆ ಎಲ್ಲರೂ ಒಂದೇ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಸ್ಥಾಪನೆ ಆಗಬೇಕು, ಗಲಭೆ, ಹತ್ಯೆಗಳು ನಿಲ್ಲಬೇಕು. ಈ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಯೇ ಮುಖ್ಯ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಕ್ರಮಕ್ಕೆ ನಾವು ಬದ್ಧ’ ಎಂದರು.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *