KARNATAKA
ಹಾಸನ : ಹೇಮಾವತಿ ನದಿಗೆ ಜಿಗಿದು ಗುತ್ತಿಗೆದಾರ ಆತ್ಮಹತ್ಯೆ, ದೃಶ್ಯ ಸಿಸಿಟಿವಿಯಲ್ಲಿ ದಾಖಲು..!
ಹಾಸನ: ಹಾಸನದ ಹೇಮಾವತಿ ನದಿಗೆ ಜಿಗಿದು ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಈ ಕೃತ್ಯ ನಡೆದಿದ್ದು ಗುತ್ತಿಗೆದಾರ ನದಿಗೆ ಜಿಗಿಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊಳೆನರಸೀಪುರದ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಸತ್ತಾರ್ (79) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ. ವೈಯುಕ್ತಿಕ ಸಮಸ್ಯೆ ಹಾಗೂ ಬೇರೆಯವರಿಗೆ ಕೊಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ವಾಪಾಸ್ ಬಾರದ ಕಾರಣ ಮನನೊಂದು ಸತ್ತಾರ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಪಟ್ಟಣದ ಹೇಮಾವತಿ ನದಿಗೆ ಜಿಗಿದು ಸತ್ತಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತ್ತಾರ್ ನದಿಗೆ ಜಿಗಿಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶವ ಪತ್ತೆಯಾಗದ ಹಿನ್ನಲೆಯಲ್ಲಿ ಕುಂದಾಪುರದ ಮುಳುಗು ತಜ್ಞರಿಂದ ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದಿದ್ದು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.