ಕಾಂಗ್ರೇಸ್ ನಪುಂಸಕರ ಪಕ್ಷ – ಹರಿಕೃಷ್ಣ ಬಂಟ್ವಾಳ

ಮಂಗಳೂರು ಮಾರ್ಚ್ 29: ಕಾಂಗ್ರೇಸ್ ನಪುಂಸಕ ಪಾರ್ಟಿಯಾಗಿದ್ದು, ಆ ಪಕ್ಷದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ. ಬಂಟ್ವಾಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಬಾಂಬ್ ದಾಳಿಗಳು, ಸೈನಿಕರ ಹತ್ಯೆ ನಡೆಯುತ್ತಿತ್ತು. ಆದರೆ ಕಾಂಗ್ರೇಸ್ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಇತ್ತೀಚೆಗೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರಗಾಮಿ ದಾಳಿಗೆ 44 ಸೈನಿಕರು ಸಾವನ್ನಪ್ಪಿರುವುದಕ್ಕೆ ಪ್ರತೀಕಾರವಾಗಿ ಕೇಂದ್ರದ ಮೋದಿ ಸರಕಾರ ನಡೆಸಿದ ವೈಮಾನಿಕ ದಾಳಿ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಸ್ಪಷ್ಟ ಉತ್ತರವನ್ನು ನೀಡಿದೆ.

ಕಾಂಗ್ರೇಸ್ ಸರಕಾರ ಪಾಕಿಸ್ತಾನಕ್ಕೆ ಗುಂಡು ಹಾಕುವುದು ಬಿಡಿ, ಕೇವಲ ಬ್ಲೇಟ್ ನಿಂದ ಗೀಚುವ ಧೈರ್ಯವನ್ನೂ ತೋರಿಸಿಲ್ಲ. ಕಾಂಗ್ರೇಸ್ ಪಕ್ಷ ನಪುಂಸಕರ ಪಕ್ಷ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಅಕ್ರಮ ಗಳಿಕೆಯಿಂದ ಆಸ್ತಿ ಮಾಡಿಕೊಂಡಿರುವ ಡಿ.ಕೆ.ಶಿವಕುಮಾರ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಣದ ಹೊಳೆ ಹರಿಸಲಿದ್ದು, ಡಿಕೆಶಿಯ ಹಣಕ್ಕೆ ಜಿಲ್ಲೆಯ ಜನತೆ ಬಲಿಯಾಗಬಾರದು ಎಂದ ಅವರು ಕಾಂಗ್ರೇಸ್ ಹಿರಿಯ ಮುಖಂಡ , ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಕಾಂಗ್ರೇಸ್ ಅಭ್ಯರ್ಥಿ ಗೆಲುವು ಸಾಧಿಸುವಂತೆ ಆಶೀರ್ವಾದ ಮಾಡಿರುವುದು ಪುರಭವನದಲ್ಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದ ಅವರು ಪೂಜಾರಿಯವರು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆಲುವು ಸಾಧಿಸುವುದಾಗಿ ಕುದ್ರೋಳಿ ಕ್ಷೇತ್ರದಲ್ಲೇ ಹೇಳುವ ಮೂಲಕ ನಳಿನ್ ಗೆಲುವಿಗೆ ಆಶೀರ್ವದಿಸಿದ್ದಾರೆ ಎಂದರು.

ಕಾಂಗ್ರೇಸ್ ಕಚೇರಿಗೂ ಕಾಲಿಡಲು ಬಿಡದ ಕಾಂಗ್ರೇಸ ನಾಯಕರು ಇದೀಗ ಪೂಜಾರಿಯವರನ್ನು ತಮ್ಮ ಸಮಾವೇಶಕ್ಕೆ ಕರೆದು ಕುದ್ರೋಳಿ ದೇವಸ್ಥಾನಕ್ಕೂ ಕಾಲಿಡದಂತೆ ಮಾಡಿದ್ದಾರೆ ಎಂದು ಅವರು ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದರು.

VIDEO

Facebook Comments

comments