ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮಂಗಳೂರಿನ ಚಿತ್ರಕಲಾವಿದ ಬಿಡಿಸಿದ ಈ ಚಿತ್ರ 

ಮಂಗಳೂರು ಮಾರ್ಚ್ 29: ಮಂಗಳೂರು ಚಿತ್ರ ಕಲಾವಿದನೊಬ್ಬ ಬರೆದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಿನ್ನಲೆಯ ಚೌಕಿದಾರ್ ಶೇರ್ ಹೈ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವೀಟರ್ ನ ಹೆಸರನ್ನು ಚೌಕಿದಾರ್ ಎಂದು ಬದಲಿಸಿಕೊಂಡಿದ್ದು, ಈಗಾಗಲೇ ಚೌಕಿದಾರ್ ಪದ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಈ ನಡುವೆ ಚೌಕಿದಾರ್‌ ಪದಕ್ಕೆ ಇದೀಗ ಹೊಸ ಪದ ಸೇರ್ಪಡೆಯಾಗಿದ್ದು, ‘ಚೌಕಿದಾರ್ ಶೇರ್ ಹೈ’ ಎಂಬ ಪೋಸ್ಟ್‌ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ಮೈ ಭಿ ಚೌಕಿದಾರ್‌’ ಅಭಿಯಾನ ಮಧ್ಯೆ ಚೌಕಿದಾರ್‌ ಶೇರ್‌ ಹೈ ಎಂಬ ಅಭಿಯಾನ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
ಇದಕ್ಕೆಲ್ಲಾ ಮೂಲ ಕಾರಣ ಮಂಗಳೂರಿನ ಕಲಾವಿದ ಜೀವನ್‌ ಆಚಾರ್ಯ ರಚಿಸಿರುವ ‘ಚೌಕಿದಾರ್‌ ಶೇರ್‌ ಹೈ’ ಪೋಸ್ಟರ್‌.

23 ವರ್ಷದ ಡಿಜಿಟಲ್‌ ಕಲಾವಿದ ಜೀವನ್‌ ಆಚಾರ್ಯ ಅವರು, ಪ್ರಧಾನಿ ಮೋದಿ ಅವರ ಅರ್ಧ ಮುಖ ಮತ್ತು ಇನ್ನರ್ಧ ಭಾಗ ಸಿಂಹದ ಮುಖವನ್ನು ಸೇರಿಸಿ, ಈ ಪೋಸ್ಟರ್‌ ರಚಿಸಿದ್ದಾರೆ. ಇದೇ 22ರಂದು ಈ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಪ್ರೊಫೈಲ್‌ನಲ್ಲಿ ಅಪ್‌ಲೋಡ್‌ ಆಗುತ್ತಿದ್ದು ಈಗಾಗಲೇ ಸಾಕಷ್ಟು ವೈರಲ್ ಆಗಿದೆ.