LATEST NEWS
ಕುಂದಾಪುರ ಬಿಜೆಪಿ ಬಿನ್ನಮತ ತಣಿಸಲು ಮುಂದಾದ ಹಾಲಾಡಿ ಶ್ರೀನಿವಾಸ ಶೆಟ್ಟಿ
ಕುಂದಾಪುರ ಬಿಜೆಪಿ ಬಿನ್ನಮತ ತಣಿಸಲು ಮುಂದಾದ ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ ಎಪ್ರಿಲ್ 12 : ಕುಂದಾಪುರ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು ತಣಿಸುವ ಕೆಲಸವನ್ನು ಕುಂದಾಪುರ ವಿಧಾನಸಭೆ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಆರಂಭಿಸಿದ್ದಾರೆ. ಇದರ ಮೊದಲ ಭಾಗವಾಗಿ ಇತ್ತೀಚೆಗೆ ಹಾಲಾಡಿ ವಿರುದ್ದ ಕಿಡಿಕಾರಿದ್ದ ಬಿಜೆಪಿ ಹಿರಿಯ ಮುಖಂಡ ಎ.ಜಿ ಕೊಡ್ಗಿ ಅವರ ಮನೆಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಹಿರಿಯ ಮುಖಂಡ ಎ.ಜಿ ಕೊಡ್ಗಿ ಅವರು ರಾಜಕೀಯಕ್ಕೆ ನಾನೇ ಕರೆದುಕೊಂಡ ಬಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ನನಗೆ ಅಗೌರವ ತೋರಿಸಿದ್ದಾರೆ. ಇದರಿಂದಾಗಿ ನನಗೆ ಮಾನಸಿಕ ಹಿಂಸೆಯಾಗಿದೆ. ಈ ಬಾರಿ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೇಟ್ ನೀಡಿದರೆ ನಾನು ಚುನಾವಣಾ ಪ್ರಚಾರದಿಂದ ದೂರ ಉಳಿಯುತ್ತೇನೆ ಎಂದು ಅಸಮಧಾನವನ್ನು ಹೊರ ಹಾಕಿದ್ದರು.
ಈಗ ಕುಂದಾಪುರದ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಅಸಮಧಾನಗೊಂಡಿರುವ ರಾಜಕೀಯ ಗುರು ಎ.ಜಿ ಕೊಡ್ಗಿ ಅವರನ್ನು ಸಮಾಧಾನ ಪಡಿಸಲು ಹಾಲಾಡಿ ಶ್ರೀನಿವಾಸ ಶೆಟ್ಟಿ ಮಂದಾಗಿದ್ದಾರೆ. ಇಂದು ಅಮಾಸೆಬೈಲಿನಲ್ಲಿರುವ ಎ.ಜಿ ಕೊಡ್ಗಿ ಅವರ ಮನೆಗೆ ಭೇಟಿ ನೀಡಿದ ಹಾಲಾಡಿ ಕೊಡ್ಗಿ ಅವರ ಆಶೀರ್ವಾದ ಪಡೆದುಕೊಂಡರು. ಬಳಿಕ ಕೊಡ್ಗಿ ಅವರೊಂದಿಗೆ ಉಪಹಾರವನ್ನು ಸೇವಿಸಿದರು.
ಈ ಕುರಿತಂತೆ ಮಧ್ಯಮದವರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೊಡ್ಗಿ ಅವರ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದಿದ್ದೆನೆ ಎಂದು ತಿಳಿಸಿದರು. ಚುನಾವಣೆ ನಿಲ್ಲುವ ಬಗ್ಗೆ ಕೂಡ ತಿಳಿಸಿದ್ದು, ಅದಕ್ಕೆ ನಿಲ್ಲಿ ಸಂತೋಷ ಎಂದು ಆಶೀರ್ವಾದ ಮಾಡಿದರು ಎಂದು ಹೇಳಿದರು. ಹಿರಿಯರಾದ ಎ.ಜಿ ಕೊಡ್ಗಿ ಅವರ ಬಗ್ಗೆ ನನಗೆ ಗೌರವ ಇದ್ದು, ರಾಜಕೀಯದಲ್ಲಿ ಕೆಲವು ಸಂದರ್ಭದಲ್ಲಿ ಈ ರೀತಿಯಾಗಿ ಅಂತರ ಉಂಟಾಗುತ್ತದೆ ಎಂದು ಹೇಳಿದರು. ಭೇಟಿಯ ಸಂದರ್ಭದಲ್ಲಿ ಅವರು ಅಸಮಧಾನದ ಬಗ್ಗೆ ಏನೂ ಮಾತನಾಡಲಿಲ್ಲ ಎಂದು ಹೇಳಿದರು.
You must be logged in to post a comment Login