LATEST NEWS
ಗೆಸ್ಟ್ ಹೌಸ್ ನಲ್ಲಿ ಪಾರ್ಟಿ – ಕುಡಿದ ಮತ್ತಿನಲ್ಲಿ ಗಲಾಟೆ…!!

ಮಂಗಳೂರು ಜೂನ್ 26: ಬೆಂಗಳೂರಿನಿಂದ ಬಂದ ತಂಡಗಳ ನಡುವೆ ಕುಡಿದ ಮತ್ತಿನಲ್ಲಿ ಗಲಾಟೆ ನಡೆದ ಘಟನೆ ಉಚ್ಚಿಲ ಬಟ್ಟಪ್ಪಾಡಿಯ ಗೆಸ್ಟ್ ಹೌಸ್ ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಬಟ್ಟಪ್ಪಾಡಿಯ ಗೆಸ್ಟ್ ಹೌಸ್ ನಲ್ಲಿ ರಾತ್ರಿ ಬೆಂಗಳೂರಿನಿಂದ ಬಂದ ತಂಡಗಳು ಪಾರ್ಟಿ ಮಾಡಿದ್ದವು, ಎರಡು ಬಸ್ ಗಳಲ್ಲಿ ಬಂದಿದ್ದ ಇವರು ತಡರಾತ್ರಿಯವರೆಗೆ ಪಾರ್ಟಿ ಮಾಡಿದ್ದರು, ಬಳಿಕ ಎರಡು ತಂಡಗಳ ನಡುವೆ ಗಲಾಟೆ ಏರ್ಪಟ್ಟಿದ್ದು, ಹೊಡೆದಾಟದ ಹಂತಕ್ಕೆ ತಲುಪಿತ್ತು, ಅದರಲ್ಲಿ ಕೆಲವರು ಗೆಸ್ಟ್ ಹೌಸ್ ನ ಹೊರಗಡೆ ಬಂದು ರಸ್ತೆ ಬದಿಯಲ್ಲಿ ಜಗಳ ಮುಂದುವರಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದವರು ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ಸ್ಥಳೀಯರು ಅಪಾದಿಸಿದ್ದಾರೆ.

ಬಳಿಕ ಸ್ಥಳೀಯರು ಒಟ್ಟು ಸೇರಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೇ ಧಾವಿಸುತ್ತಿದ್ದಂತೆ ಬೆಂಗಳೂರಿನಿಂದ ಬಂದವರು ಪರಾರಿಯಾಗಿದ್ದಾರೆ. ಸ್ಥಳೀಯರು ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ