Connect with us

    LATEST NEWS

    ಮುಲ್ಕಿ – ದ್ವಿಚಕ್ರವಾಹನಗಳ ಮುಖಾಮುಖಿ ಡಿಕ್ಕಿ ಓರ್ವ ವಿಧ್ಯಾರ್ಥಿ ಸಾವು..ಮತ್ತೋರ್ವ ಗಂಭೀರ

    ಮುಲ್ಕಿ ಜೂನ್ 26: ಕಾಲೇಜು ವಿಧ್ಯಾರ್ಥಿಗಳ ಬೈಕ್ ಹಾಗೂ ಸ್ಕೂಟರ್ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ವಿಧ್ಯಾರ್ಥಿ ಸಾವನಪ್ಪಿದ್ದು, ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಮೂಲ್ಕಿ ವಿಜಯಾ ಕಾಲೇಜು ರಸ್ತೆಯ ಲೇಡೀಸ್ ಹಾಸ್ಟೆಲ್ ಬಳಿ ಶನಿವಾರ ರಾತ್ರಿ ನಡೆದಿದೆ.


    ಮೃತ ವಿಧ್ಯಾರ್ಥಿಯನ್ನು ಕಕ್ವ ನಿವಾಸಿ ಮಾನಿಷ್ ಎಂದು ಗುರುತಿಸಲಾಗಿದ್ದು, ಕವತ್ತಾರ್‍ ನಿವಾಸಿ ದೀಕ್ಷಿತ್ ಗಂಭೀರ ಗಾಯಗೊಂಡಿದ್ದಾರೆ. ಇಬ್ಬರೂ ವಿಜಯ ಕಾಲೇಜಿನ ಪದವಿ ವಿದ್ಯಾರ್ಥಿಗಳು. ಮಾನಿಷ್ ಮೂಲ್ಕಿ ಕಡೆಯಿಂದ ಹಾಗೂ ದೀಕ್ಷಿತ್ ವಿಜಯ ಕಾಲೇಜು ಕಡೆಯಿಂದ ವೇಗವಾಗಿ ಬರುತ್ತಿದ್ದು, ಹಾಸ್ಟೆಲ್ ಬಳಿ ರಿಕ್ಷಾವನ್ನು ಓವರ್‌ಟೇಕ್ ಮಾಡುವ ವೇಳೆ ಎರಡೂ ಬೈಕ್‌ಗಳು ಮುಖಾಮುಖಿ ಢಿಕ್ಕಿ ಹೊಡೆದಿವೆ. ಢಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ನಜ್ಜುಗುಜ್ಜಾಗಿವೆ.

    Share Information
    Advertisement
    Click to comment

    You must be logged in to post a comment Login

    Leave a Reply