Connect with us

    LATEST NEWS

    ಶಂಕಾಸ್ಪದ ಕೊರಿಯರ್ ತೆರೆದು ನೋಡುವ ಅಧಿಕಾರ ಸರಕಾರಕ್ಕೆ

    ನವದೆಹಲಿ ಡಿಸೆಂಬರ್ 20: ದೇಶದ ಭದ್ರತೆಯ ದೃಷ್ಟಿಯಿಂದ ಅಂಚೆ ಕಚೇರಿಗೆ ಬಟವಾಡೆ ಆಗಲು ಬರುವ ಪತ್ರಗಳನ್ನು ಯಾವುದೇ ಅಧಿಕಾರಿಗಳು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನೀಡುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ. ಇದೇ ವೇಳೆ, ಖಾಸಗಿ ಕೊರಿಯರ್‌ಗಳನ್ನೂ ಇದೇ ಮೊದಲ ಬಾರಿ ಮಸೂದೆ ವ್ಯಾಪ್ತಿಗೆ ತರಲಾಗಿದ್ದು, ಕೊರಿಯರ್ ಅಂಗಡಿಗೆ ಬರುವ ಶಂಕಾಸ್ಪದ ಪತ್ರಗಳನ್ನು ತೆರೆದು ನೋಡಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸರ್ಕಾರಕ್ಕೆ ಲಭಿಸಿದೆ.


    ಈ ಮಸೂದೆ ರಾಜ್ಯಸಭೆಯಲ್ಲಿ ಡಿಸೆಂಬರ್ 4ರಂದೇ ಅಂಗೀಕಾರ ಪಡೆದುಕೊಂಡಿತ್ತು. ಸಂಸತ್‌ನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಉತ್ತರ ನೀಡಬೇಕು ಎಂಬ ವಿಪಕ್ಷಗಳ ಗದ್ದಲದ ನಡುವೆಯೇ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಹೊಸ ಮಸೂದೆ 125 ವರ್ಷಗಳಷ್ಟು ಪೋಸ್ಟಾಫೀಸ್ ಹಳೆಯದಾದ ಕಾಯ್ದೆ (1898)ಯನ್ನು ಬದಲಿಸಲಿದೆ. ಈ ಮಸೂದೆ ಅಂಚೆ ಕಚೇರಿ ಹಾಗೂ ಖಾಸಗಿ ಕೊರಿಯರ್ ಕಚೇರಿಗಳಿಗೆ ಬರುವ ಪತ್ರಗಳನ್ನು ತೆರೆದು ನೋಡುವ, ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply