KARNATAKA
ಹುಡ್ಗೀರ ಬಾತ್ ರೂಂನಲ್ಲಿ ಕ್ಯಾಮರಾ ಇಟ್ಟ ಕಾಮುಕನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು..!

ಜೇವರ್ಗಿ : ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್ನಲ್ಲಿ ಗುಪ್ತ ಕ್ಯಾಮರಾ ಅಳವಡಿಸಿದ್ದ ಕಾಮುಕನನ್ನು ವಿದ್ಯಾರ್ಥಿನಿಯರು ಹಿಡಿದು ತದಕಿದ ಘಟನೆ ಜೇವರ್ಗಿ ಪಟ್ಟಣದ ಶಾಂತಾನಗರದಲ್ಲಿರುವ ಅಲ್ಪಸಂಖ್ಯಾತರ ಹಾಸ್ಟೆಲ್‌ನಲ್ಲಿ ನಡೆದಿದೆ.
ಆರೋಪಿ ಕಿರಾತಕನನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ.ಹಾಸ್ಟೆಲ್ಗೆ ಹೊಂದಿಕೊಂಡಿರುವ ಮನೆಯಲ್ಲಿ ವಾಸವಾಗಿದ್ದ ಸಲೀಂ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆಸಿದ್ದಾನೆ. ಬಾತ್ರೂಮ್ಗೆ ಹೋದ ವಿದ್ಯಾರ್ಥಿನಿಯರು, ಗುಪ್ತ ಕ್ಯಾಮೆರಾ ಇಟ್ಟಿರುವುದನ್ನು ಗಮನಿಸಿದ ಕೂಡಲೇ ಹೊರಬಂದು ಕಾಮುಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯರು, ಗಲಾಟೆ ಬಿಡಿಸಿ ಆರೋಪಿ ಎಸ್ಕೇಪ್ ಆಗಲು ಸಹಕರಿಸಿದ್ದರು ಎಂದು ಹೇಳಲಾಗಿದ್ದು ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ತಹಶೀಲ್ದಾರ್ ಮತ್ತು ಜೇವರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮನೆಯವರನ್ನು ವಿಚಾರಣೆ ಕಾಮುಕನನ್ನ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
