Connect with us

LATEST NEWS

ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದ ಮಹಿಳೆಯನ್ನು ಜೀವಂತವಾಗಿ ಸುಟ್ಟು ಹಾಕಿದ ಕುಟುಂಬ…!!

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದ ಮಹಿಳೆಯನ್ನು ಆಕೆಯ ಕುಟುಂಬ ಸದಸ್ಯರೆ ಜೀವಂತವಾಗಿ ಸುಟ್ಟುಹಾಕಿರುವ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ತಂದೆ, ಸಹೋದರ, ಸೋದರ ಮಾವ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಮುಸ್ಲಿಂ ಹುಡುಗನೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಮಹಿಳೆಗೆ ಕುಟುಂಬಸ್ಥರು ಒತ್ತಡ ಹಾಕಿದ್ದರು. ಆದರೆ ಸಂಬಂಧ ಕಡಿದುಕೊಳ್ಳದ ಮಹಿಳೆಯ ಹತ್ಯೆ ಮಾಡುವಂತೆ ಆಕೆಯ ಕುಟುಂಬ ಕಿಲ್ಲರ್ ವರುಣ್ ತಿವಾರಿಗೆ 1.5 ಲಕ್ಷ ರೂ.ಸೂಪಾರಿ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ತಂದೆ ಕೈಲಾಶ್ ಯಾದವ್, ಸಹೋದರ ಅಜಿತ್ ಯಾದವ್, ಸೋದರ ಮಾವ ಸತ್ಯಪ್ರಕಾಶ್ ಯಾದವ್ ಮತ್ತೊಬ್ಬ ವ್ಯಕ್ತಿ ಸೀತಾರಾಮ್ ಯಾದವ್ ಅವರನ್ನು ಭಾನುವಾರ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪೆಟ್ರೋಲ್ ಕಂಟೇನರ್ ಮತ್ತು ಮೋಟಾರ್ ಸೈಕಲ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *