LATEST NEWS
ಕಳೆದ ಎಂಟು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ 2.34 ಮತ್ತು ಡೀಸೆಲ್ ದರ ರೂ 2.57ರಷ್ಟು ಏರಿಕೆ
ಮಂಗಳೂರು ಫೆಬ್ರವರಿ 16: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಸತತ ಎಂಟನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆಗಳಲ್ಲಿ ಏಕೆ ಕಂಡಿದೆ. ಫೆಬ್ರವರಿ 9ರಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆ ಕಳೆದ ಎಂಟು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹2.34 ಮತ್ತು ಡೀಸೆಲ್ ದರ ₹2.57ರಷ್ಟು ಹೆಚ್ಚಳ ಕಂಡಿದೆ
ಮಂಗಳವಾರ ದೇಶದಲ್ಲಿ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಿದ್ದು. ಮುಂಬೈನಲ್ಲಿ ಪೆಟ್ರೋಲ್ ದರ 96 ರೂಪಾಯಿ ಸಮೀಪದಲ್ಲಿದೆ. ವಾಣಿಜ್ಯ ನಗರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ರೂ 95.75, ಡೀಸೆಲ್ ಬೆಲೆ 86.72 ಮುಟ್ಟಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 30 ಪೈಸೆ ಹೆಚ್ಚಳವಾಗಿ 89.29 ಮತ್ತು ಡೀಸೆಲ್ 35 ಪೈಸೆ ಏರಿಕೆಯೊಂದಿಗೆ 79.70 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‌ಗೆ 92.82 ಹಾಗೂ ಲೀಟರ್ ಡೀಸೆಲ್‌ಗೆ 84.49 ರಷ್ಟಾಗಿದ್ದು, ಜನರ ಜೇಬಿಗೆ ಹೊರೆಬಿದ್ದಿದೆ.
ಇನ್ನು ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಪೆಟ್ರೋಲ್ ಮೇಲಿನ ತೆರಿಗೆ ಕಡಿತಗೊಳಿಸುವುದಿಲ್ಲ ಎಂದು ತಿಳಿಸಿದೆ.