Connect with us

    LATEST NEWS

    ತುಳುನಾಡಿನ ಮಗಳು ಕಮಲಾದೇವಿ ಚಟ್ಟೋಪಾಧ್ಯಾಯ ಗೂಗಲ್ ಡೂಡಲ್ ಗೌರವ

    ತುಳುನಾಡಿನ ಮಗಳು ಕಮಲಾದೇವಿ ಚಟ್ಟೋಪಾಧ್ಯಾಯ ಗೂಗಲ್ ಡೂಡಲ್ ಗೌರವ

    ಮಂಗಳೂರು ಎಪ್ರಿಲ್ 3: ತುಳುನಾಡಿನ ಜನರಿಗೆ ಇಂದು ಸಂಭ್ರಮವೋ ಸಂಬ್ರಮ . ಯಾಕೆಂದರೇ ವಿಶ್ವವಿಖ್ಯಾತ ಗೂಗಲ್ ಇಂದು ತನ್ನ ಡೂಡಲ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ತುಳುನಾಡಿನ ಮಗಳು ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ ಚಿತ್ರ ನಮನ ಸಲ್ಲಿಸಿದೆ. ಕಮಲಾದೇವಿ ಚಟ್ಟೋಪಾಧ್ಯಾಯ ಅವರ 115ನೇ ಜನ್ಮ ದಿನಾಚರಣೆಗೆ ಗೂಗಲ್ ಈ ಗೌರವ ನಮನ ಸಲ್ಲಿಸಿದೆ.

    ಗೂಗಲ್ ತನ್ನ ಡೂಡಲ್ ನಲ್ಲಿ ಕಮಾಲಾದೇವಿ ಅವರ ಕಲೆಗಳು ಹಾಗೂ ಕೊಡುಗೆಯನ್ನು ಪರಿಚಯಿಸುವ ಸಣ್ಣ ಪ್ರಯತ್ನವೂ ನಡೆದಿದೆ. ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ಕಮಲಾದೇವಿಯವರು ಹೋರಾಟಕ್ಕೆ ನಿಂತರು, ತಾವು ಒಂದು ಹೆಣ್ಣು ಎನ್ನುವನ್ನು ಮರೆತು ಎಲ್ಲರಂತೆಯೇ ಹೋರಾಟದಲ್ಲಿ ಪಾಲ್ಗೊಂಡಿದ್ದರು.

    ಕಮಲಾದೇವಿಯರು 1903, ಏಪ್ರಿಲ್ 3ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಅನಂತಯ್ಯ ಧಾರೇಶ್ವರ ಮಂಗಳೂರಿನ ಜಿಲ್ಲಾ ಕಲೆಕ್ಟರ್ ಆಗಿದ್ದವರು. ತಾಯಿ ಗಿರಿಜಾಬಾಯಿ. ಕಮಲಾದೇವಿಯವರ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿ ಮುಗಿಸಿದರು. ಕ್ವಿನ್ ಮೇರಿಸ್ ಕಾಲೇಜ್ ಮದ್ರಾಸ್ ನಲ್ಲಿ ಕಾಲೇಜು ಶಿಕ್ಷಣಕ್ಕೆ ಮುಗಿಸಿದರು, ಕಮಲಾದೇವಿ ಅವರಿಗೆ 7 ವರ್ಷ ಪ್ರಾಯದ ಸಂದರ್ಭದಲ್ಲಿ ಅವರ ತಂದೆ ತಿರಿಕೊಂಡಿದ್ದರು.

    ಕಮಲಾದೇವಿ ಅವರಿಗೆ ಸರೋಜಿನಿ ನಾಯಡು ಅವರ ಸಹೋದರ ಕವಿ ನಾಟಕಕಾರ ಹರೀಂದ್ರ ನಾಥ ಚಟ್ಟೋಪಾಧ್ಯಾಯ ಅವರೊಂದಿಗೆ ಮದುವೆಯಾದರು, ನಂತರ ಕಮಲಾದೇವಿ ಅವರು ತನ್ನ ಪತಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರೊಂದಿಗೆ ಲಂಡನ್ ಗೆ ತೆರಳಿದರು, ಅಲ್ಲಿ ಬೆಡ್ ಪೋರ್ಡ್ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಅಧ್ಯಯನ ಮಾಡಿದ ಅವರು ಅಲ್ಲಿ ಎ ಟ್ರೂ ಕರ್ಮಯೋಗಿ ಎಂಬ ಪುಸ್ತಕವನ್ನು ಬರೆದರು.

    1923ರ ಸಂದರ್ಭ ಭಾರತಕ್ಕೆ ಬಂದ ಕಮಲಾದೇವಿ ದಂಪತಿಗಳು ಮಹಾತ್ಮಾಗಾಧಿ ಅವರ ಸ್ವಾಂತಂತ್ರ್ಯ ಹೋರಾಟದಿಂದ ಪ್ರೆರೇಪಿತರಾಗಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು.

    ಸ್ವಾತಂತ್ರ್ಯದ ನಂತರ ಕಮಲಾದೇವಿ ಅವರು ಯಾಂತ್ರೀಕರಣದಿಂದ ಕರಕುಶಲ ಕೈಗಾರಿಕೆಗೆ ತೊಂದರೆಯಾಗುವುದನ್ನು ಗಮನಿಸಿ ಹಲವು ಕರಕುಶಲ ಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಅಲ್ಲದೆ ಕಲೆ ಸಂಗೀತ ನಾಟಕಗಳಿಗೆ ಆದ್ಯತೆ ನೀಡಿದ ಇವರು ಅದರ ಏಳಿಗೆಗಾಗಿ ಶ್ರಮಿಸಿದ್ದರು.

    ಕಮಲಾದೇವಿ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸಂಗೀತ ಅಕಾಡೆಮಿ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಮ್ ಹಾಗೂ ಕ್ರ್ಯಾಫ್ಟ್ಸ್ ಕೌಂನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು. ಅವರು ತಮ್ಮ 85ನೇ ವಯಸ್ಸಿನಲ್ಲಿ ಅಕ್ಟೋಬರ್ 29, 1988ರಲ್ಲಿ ನಿಧನರಾದರು.

    Share Information
    Advertisement
    Click to comment

    You must be logged in to post a comment Login

    Leave a Reply