Connect with us

    DAKSHINA KANNADA

    ವಿಟ್ಲ ಪೋಲಿಸ್ ಚೆಕ್ ಪೋಸ್ಟ್ ಬಳಿಯೇ ಕಳ್ಳತನ

     ವಿಟ್ಲ ಪೋಲಿಸ್ ಚೆಕ್ ಪೋಸ್ಟ್ ಬಳಿಯೇ ಕಳ್ಳತನ

    ಪುತ್ತೂರು, ಡಿಸೆಂಬರ್ 07: ಪೊಲೀಸ್ ಚೆಕ್ ಪೋಸ್ಟ್ ಹತ್ತಿರದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿಟ್ಲದಲ್ಲಿ ನಡೆದಿದೆ.


    ವಿಟ್ಲದ ಉಕ್ಕಡದಲ್ಲಿ ಈ ಘಟನೆ ನಡೆದಿದ್ದು ಉಕ್ಕಡ ಪೊಲೀಸ್ ಚೆಕ್ ಪೋಸ್ಟ್ ಬಳಿ ಇರುವ ಅಬ್ಬಾಸ್ ಹಾಜಿ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ.

    ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಬಾಗಿಲನ್ನು ಕಳ್ಳರು ಒಡೆದಿದ್ದಾರೆ.

    ಮನೆಯ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 10.5 ಲಕ್ಷ ರೂಪಾಯಿ ಮೌಲ್ಯದ 44 ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

    ಅಬ್ಬಾಸ್ ಹಾಜಿ ಇಂದು ಬೆಳಗ್ಗೆ ಮನೆ ಮರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಬ್ಬಾಸ್ ಹಾಜಿ ಪಕ್ಕದಲ್ಲೇ ಪೊಲೀಸ್ ಚೆಕ್ ಪೊಸ್ಟ್ ಇದ್ದರು ಕಳ್ಳತನ ನಡೆದಿರುವುದು ವಿಪರ್ಯಾಸ.

    ಕಳ್ಳತನ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

    ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply