LATEST NEWS
ನಂತೂರು ಜಂಕ್ಷನ್ ಬಳಿ ಅಪಘಾತ :ಮಹಿಳೆ ಸಾವು

ನಂತೂರು ಜಂಕ್ಷನ್ ಬಳಿ ಅಪಘಾತ : ಮಹಿಳೆ ಸಾವು
ಮಂಗಳೂರು ಡಿಸೆಂಬರ್ 7: ಖಾಸಗಿ ಬಸ್ ಹಾಗೂ ಕಂಟೈನರ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 7.15ರ ಸಮಯದಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಬಸ್ ಬಿಕರ್ನಕಟ್ಟೆಯಿಂದ ಸ್ಟೇಟ್ ಬ್ಯಾಂಕ್ ನತ್ತ ತೆರಳುತ್ತಿದ್ದು, ಗುಜರಾತ್ ನ ಕಂಟೈನರ್ ಟ್ರಕ್ ಪಣಂಬೂರಿನಿಂದ ಪಂಪ್ ವೆಲ್ ನತ್ತ ತೆರಳುತ್ತಿತ್ತು.
ನಂತೂರು ಜಂಕ್ಷನ್ ನಲ್ಲಿ ಕಂಟೈನರ್ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ನಂತರ ಒಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ಒರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು 17 ಮಂದಿಗೆ ಗಾಯಗಳಾಗಿವೆ.
ಮೃತಪಟ್ಟವರನ್ನು ಗುರುಪುರ ಕೈಕಂಬದ ನಿವಾಸಿ ಕವಿತಾ ಎಂದು ಗುರುತಿಸಲಾಗಿದೆ.
ವೆನ್ಲಾಕ್ ಆಸ್ಪತೆಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಅವರು ಬಸ್ ನ ಮುಂಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಕಂಟೈನರ್ ಬಸ್ ನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕವಿತಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಬಸ್ ಚಾಲಕ , ಕಂಟೈನರ್ ಚಾಲಕ ಹಾಗೂ ಕಾರಿನಲ್ಲಿದ್ದ ಧರ್ಮಗುರು ಗಳು ಸೇರಿದಂತೆ ಸುಮಾರು 17 ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟಿಯೋಗಾಗಿ…