LATEST NEWS
ಧೀಮಾಕಿನ ಮಹಿಳೆಯ ಹಾಸ್ಯ ಭರಿತ ಟ್ರೋಲ್, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಧೀಮಾಕಿನ ಮಹಿಳೆಯ ಹಾಸ್ಯ ಭರಿತ ಟ್ರೋಲ್, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಮಂಗಳೂರು, ಡಿಸೆಂಬರ್ 07 : ಇತ್ತೀಚೆಗೆ ಬಸ್ಸಿನಲ್ಲಿ ಲೇಡಿಸ್ ಸೀಟ್ ನಲ್ಲಿ ಕುಳಿತಿದ್ದ ಯುವಕನೂಬ್ಬನ ಕತ್ತಿನ ಪಟ್ಟಿ ಹಿಡಿದು ಸೀಟು ಗಿಟ್ಟಿಸಿಕೊಂಡ ಮಹಿಳೆ ಈಗ ವಿಚಿತ್ರ ರೀತಿಯಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.
ಮಂಗಳೂರಿನ ಬಜಪೆ ಮೂಲದ ಈ ಧೀಮಾಕಿನ ಮಹಿಳೆಯ ಹಾಸ್ಯ ಭರಿತ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮೂಡಿಬರುತ್ತಿವೆ.
ಇತ್ತಿಚೆಗೆ ರಾಜ್ಯ ರಸ್ತೆ ಸಾರಿಗೆಯ ಬಸ್ ನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಸೀಟಿನಲ್ಲಿ ಯುವಕನೊಬ್ಬ ಕೂತು ಪ್ರಯಾಣಿಸುತ್ತಿದ್ದಾಗ , ಈ ಯುವಕ ಹಾಗು ಮಹಿಳೆಯ ನಡುವೆ ತೀವ್ರ ಮಾತಿನ ಜಟಾಪಟಿ ನಡೆದು, ಕತ್ತಿನ ಪಟ್ಟಿ ಹಿಡಿಯುವ ಮಟ್ಟಕ್ಕೂ ತಲುಪಿತ್ತು.
ಈ ಜಟಾಪಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ಘಟನೆ ಪತ್ರಿಕೆ, ಸುದ್ದಿ ವಾಹಿನಿ ಗಳಲ್ಲಿ ಭಾರಿ ಪ್ರಚಾರ ಪಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಸೀಟಿಗಾಗಿ ಮಹಿಳೆ ನಡೆಸಿದ್ದು, ಹೈ ಡ್ರಾಮಾ ಎಂದು ಒಂದೆಡೆ ಭಾರಿ ಆಕ್ರೋಶ ವ್ಯಕ್ತವಾದರೆ ಮತ್ತೊಂದೆಡೆ ಮಹಿಳೆಯರ ಹಕ್ಕನ್ನು ಹೋರಾಡಿ ಪಡೆದ ಧೀಮಂತ ಮಹಿಳೆ ಎಂಬ ರೀತಿಯಲ್ಲಿ ಕಮೆಂಟ್ ಗಳು ರಾರಾಜಿಸಿದವು.
ಈ ವಿಚಾರದಲ್ಲಿ ಎಲ್ಲೆಡೆ ನ್ಯಾಯ, ಆನ್ಯಾಯ,ಹಕ್ಕು,ಸಮಾನತೆಗಳ ಬಗ್ಗೆ ಬಾರಿ ಚರ್ಚೆ ಆರಂಭವಾಗಿದ್ದುವು.
ಆದರೆ ಇವು ಎಲ್ಲವುಗಳ ನಡುವೆ ಬಸ್ ನಲ್ಲಿ ನಡೆದ ಜಟಾಪಟಿಯ ಘಟನೆ ಟ್ರೋಲ್ ಗಳಿಗೆ ಆಹಾರ ವಾಗಿದೆ.
ಸೀಟು ಗಿಟ್ಟಿಸಿ ಕೊಂಡ ಆ ಮಹಿಳೆಯನ್ನು ಬಳಸಿ ಕೊಂಡು ಹಲವಾರು ಹಾಸ್ಯ ಭರಿತ ಟ್ರೋಲ್ ಗಳು ಹುಟ್ಟಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ.
ಕೆಲವು ಟ್ರೋಲ್ ಗಳು ಹೀಗಿವೆ.
ಮಗುವೊಂದು ತನ್ನ ತಾಯಿಯ ಮಡಿಲಲ್ಲಿ ಹಾಯಾಗಿ ಕುಳಿತು ಕೊಳ್ಳಲು ಸೀಟು ಸಿಕ್ಕಿತು ಅಂದು ಕೊಂಡಾಗ ಈ ಮಹಿಳೆ ಅಲ್ಲಿಗೆ ಬಂದು ” ಏಳು ನೀನು ಏಳು ನನ್ನ ಸೀಟದು” ಎಂದು ಮಗುವಿನೊಂದಿಗೆ ಮಹಿಳೆ ಜಗಳಕ್ಕೆ ಬರುವ ಸನ್ನಿವೇಶ ಸೃಷ್ಟಿಸಲಾಗಿದೆ.
ಅದಕ್ಕೆ ಮಗು’ ಈ ಮಹಿಳೆ ಇಲ್ಲಿಗೂ ಬಂದ್ಲಾ ‘ಅನ್ನುವಂತೆ ಟ್ರೋಲ್ ಹರಿಬಿಡಲಾಗಿದೆ.
ಮತ್ತೊಂದರಲ್ಲಿ ನಾಯಿಯೊಂದು ಮನೆಯ ಎದುರು ತನ್ನಷ್ಟಕ್ಕೆ ಕುಳಿತುಕೊಂಡಿದ್ದಾಗ ಈ ಮಹಿಳೆಯ ಚಿತ್ರ ಬಳಸಿ ” ಏಳು ನೀನು ಏಳು ನನ್ನ ಸೀಟದು” ಎನ್ನುವಂತೆ ಸಂಭಾಷಣೆ ಸೇರಿಸಲಾಗಿದೆ.
ಇದಕ್ಕೆ ನಾಯಿ ಈ ಹೆಂಗಸ್ಸುಇಲ್ಲಿಯೂ ಬಂದ್ಳಾ ? ಎಂದು ಹೇಳಿ ಹೊರಟು ಹೋಗುವ ತುಳು ಭಾಷೆಯ ಟ್ರೋಲ್ ಸೃಷ್ಟಿಸಲಾಗಿದೆ.
ಇವುಗಳ ಮಧ್ಯೆ ಮಂಗಳೂರಿನ ಖಾಸಗಿ ಹಾಗು ಸರಕಾರಿ ಸಾರಿಗೆ ಬಸ್ ನಲ್ಲಿ ಆ ಪೊಂಜೋವು ಬರುವು ಮಾರಾಯೆರೇ ,
ಬತ್ತಿ ಕೂಡ್ಲೇ ಸೀಟ್ ಬುಡ್ದ್ ಕೊರ್ಲೆ ( ಆ ಹೆಂಗಸು ಬರ ಬಹುದು ಮಾರಾಯಾ. ಬಂದ ಕೂಡಲೇ ಸೀಟು ಬಿಟ್ಟುಕೊಡಿ) ಎನ್ನುವ ಟ್ರೋಲ್ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರುಗಳು ಈ ಟ್ರೋಲ್ ಗಳಲ್ಲಿ ಬಂದು ಬಿಟ್ಟಿದ್ದಾರೆ.
ಹೀಗೆ ಒಟ್ಟಾರೆಯಾಗಿ ಮಹಿಳೆ ಕುರಿತ ಈ ಟ್ರೋಲ್ ಗಳು ಕೆಲವರಿಗೆ ನಗು ತರಿಸಿದರೆ ಮತ್ತು ಕೆಲವರಿಗೆ ಆಕ್ರೋಶ ತರಿಸಿದ್ದು ಮಾತ್ರ ಸುಳ್ಳಲ್ಲ.
You must be logged in to post a comment Login