Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದಲ್ಲಿ 46.52 ಲಕ್ಷ ಮೌಲ್ಯದ ಚಿನ್ನ ವಶ

    ಮಂಗಳೂರು ಸೆಪ್ಟೆಂಬರ್ 26: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಎರಡು ಪ್ರಕರಣಗಳನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.


    ಸೆಪ್ಟೆಂಬರ್ 23 ಮತ್ತು ಸೆಪ್ಟೆಂಬರ್ 24 ರಂದು ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 46.52 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 5 ಮಂದಿ ಪ್ರಯಾಣಿಕರು 24 ಕ್ಯಾರೆಟ್‌ನ ಒಟ್ಟು 775 ಗ್ರಾಂ ಚಿನ್ನವನ್ನು ಒಳ ಉಡುಪು, ಏರ್‌ಪೋಡ್ಸ್ ಮತ್ತು ಟ್ರಾಲಿಬ್ಯಾಗ್‌ನ ರಾಡ್‌ಗಳಲ್ಲಿ ಅಂಟಿಸಿ ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply