Connect with us

    DAKSHINA KANNADA

    ಕರ್ಫ್ಯೂ ಸಮಯದಲ್ಲಿ ಮದುವೆಗೆ ಹೋಗಬೇಕೆ? ಇಲ್ಲಿದೆ ವಿವರ..

    ಮಂಗಳೂರು, ಏಪ್ರಿಲ್ 21: ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಶನಿವಾರ ಮತ್ತು ಭಾನುವಾರ ಕರ್ಫ್ಯೂ ಜಾರಿಗೊಳಿಸಿದೆ. ವಾರಾಂತ್ಯದ ಕರ್ಫ್ಯೂ ನಡುವೆ ಮದುವೆ ಕಾರ್ಯಕ್ರಮಗಳಿಗೆ ಅನುಮತಿ ತೆಗದುಕೊಳ್ಳಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಏನು ಮಾಡಬೇಕು? ಎಂಬ ಗೊಂದಲಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಉತ್ತರಿಸಿದ್ದಾರೆ.

    ಈಗಾಗಲೇ ರಾಜ್ಯ ಸರ್ಕಾರದ ಆದೇಶದಂತೆ ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಮದುವೆ ಮನೆಯವರು ಮೊದಲು ತಾವು ಕರೆದಿರುವ 50 ಮಂದಿಯ ಹೆಸರಿನ ಪಟ್ಟಿಯನ್ನು ಸಿದ್ಧಪಡಿಸಬೇಕು. ಆ 50 ಮಂದಿಯ ಪಟ್ಟಿಯಲ್ಲಿ ಅರ್ಚಕರು, ಮದುವೆ ಗಂಡು-ಹೆಣ್ಣು, ಫೋಟೋಗ್ರಾಫರ್ ಕೂಡಾ ಒಳಗೊಂಡಿರುತ್ತಾರೆ. ಪಟ್ಟಿಯನ್ನು ಮಹಾನಗರ ಪಾಲಿಕೆಯ ಜನರಾದರೆ ಪಾಲಿಕೆಯ ಆಯುಕ್ತರ ಬಳಿ, ಪಟ್ಟಣ ಪಂಚಾಯತಿ  ವ್ಯಾಪ್ತಿಯಾದರೆ ತಹಶೀಲ್ದಾರ್ ಬಳಿ, ಗ್ರಾಮ ಪಂಚಾಯತ್ ವ್ಯಾಪ್ತಿಯಾದರೆ ಪಿಡಿಒ ಬಳಿ ನೀಡಿ ಅನುಮತಿ ಪತ್ರ ಪಡೆದುಕೊಳ್ಳಬೇಕು.

    ಪಟ್ಟಿಯನ್ನು ನೀಡಿದಾಗ ಮದುವೆ ಕಾರ್ಯಕ್ರಮಕ್ಕೆ ಅನುಮತಿ ಸಿಗುತ್ತದೆ. ಆದರೆ 50 ಮಂದಿಗಿಂತ ಹೆಚ್ಚು ಜನ ಕಾರ್ಯಕ್ರಮದಲ್ಲಿದ್ದರೆ ಅನುಮತಿ ನೀಡಿದ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ. 50 ಜನರ ಪಟ್ಟಿಯಲ್ಲಿರುವ ವ್ಯಕ್ತಿ ಮದುವೆ ಕಾರ್ಯಕ್ರಮಗಳಿಗೆ ಹೋಗಬೇಕಾದರೆ ಮದುವೆ ಕಾರ್ಯಕ್ರಮದ ಮೂಲ ಆಮಂತ್ರಣ ಪತ್ರಿಕೆ, ಪಟ್ಟಿಯಲ್ಲಿ ಹೆಸರಿದ್ದ ಬಗ್ಗೆ ದಾಖಲಾತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಹೊಂದಿರಲೇಬೇಕು.

    ಕಾರಿನಲ್ಲಿ ಪ್ರಯಾಣಿಸುವಾಗ ಕುಟುಂಬದ ಇಬ್ಬರು ಮದುವೆಗೆ ಹೋಗಬೇಕಾದರೆ ಇಬ್ಬರಲ್ಲೂ ಈ ಎಲ್ಲಾ ದಾಖಲಾತಿ ಗಳು ಇರಲೇಬೇಕಾಗುತ್ತದೆ ಎಂದುದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಸ್ಪಷ್ಟ ಪಡಿಸಿದ್ದಾರೆ.ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಇದೆ.

    ಆದರೆ ಅವರ ಪರಿಸರದ ವ್ಯಾಪ್ತಿಯಲ್ಲಿ ಮಾತ್ರ ಖರೀದಿಸಲು ಅವಕಾಶಗಳಿದ್ದು, ಬೇರೆಡೆಗೆ ಹೋಗಿ ಅನಗತ್ಯ ಓಡಾಟ ನಡೆಸುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ದೇವಸ್ಥಾನಗಳಲ್ಲಿ ಪುರೋಹಿತರು, ದೇವಸ್ಥಾನದ ಸಿಬ್ಬಂದಿ ಸೇರಿಕೊಂಡು ನಡೆಸುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೆ ಸಾರ್ವಜನಿಕರು‌ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *