Connect with us

DAKSHINA KANNADA

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದಿನಿಂದ ಎಲ್ಲ ಸೇವೆಗಳು ಸ್ಥಗಿತ

ಸುಬ್ರಹ್ಮಣ್ಯ, ಎಪ್ರಿಲ್ 21 : ಕೊರೊನಾ ಭೀತಿಯ ಹಿನ್ನೆಲೆಯಿಂದಾಗಿ ಧಾರ್ಮಿಕ ಕ್ಷೇತ್ರಗಳನ್ನ ಬಂದ್‌ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಎಲ್ಲಾ ಸೇವನೆಗಳನ್ನ ಬುಧವಾರ ಮಧ್ಯರಾತ್ರಿಯಿಂದಲೇ ಸ್ಥಗಿತಗೊಳಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

ದೇವರ ದರ್ಶನ, ಸೇವೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ವಿಶೇಷ ಉತ್ಸಾವಾದಿಗಳನ್ನ ತಡೆಹಿಡಿಯಲಾಗಿದ್ದು, ದೇವಸ್ಥಾನದ ವಸತಿಗೃಹ, ಅತಿಥಿ ಗೃಹಗಳನ್ನು ಭಕ್ತರಿಗೆ ಅಥವಾ ಸಾರ್ವಜನಿಕರಿಗೆ ಹಂಚಿಕೆ ಮಾಡದಿರಲು ಸೂಚಿಸಲಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಆಡಳಿತ ಮಂಡಳಿ, ‌’ಈಗಾಗ್ಲೇ ಸೇವೆಗಳನ್ನ ಬುಕ್ ಮಾಡಿದವರಿಗೆ ಸೇವೆ ಆರಂಭವಾದ ಬಳಿಕ ಆಧ್ಯತೆ ಮೇರೆಗೆ ಸೇವಾ ಅವಕಾಶ ನೀಡಲಾಗುವುದು’ ಎಂದಿದ್ದಾರೆ.