LATEST NEWS
ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನಾಚರಣೆ

ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನಾಚರಣೆ
ಮಂಗಳೂರು ಮೇ 20: ಮಹಾತ್ಮಾಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜನ್ಮದಿನವನ್ನು ಮಂಗಳೂರಿನಲ್ಲಿ ಆಚರಿಸಲಾಗಿದೆ.
ಮೇ 19 ನಾಥೂರಾಮ್ ಗೋಡ್ಸೆ ಜನ್ಮದಿನವಾಗಿದ್ದು, ದೇಶಭಕ್ತನ ಹೆಸರಿನಲ್ಲಿ ಮಹಾತ್ಮಗಾಂಧಿ ಹಂತಕ ನಾಥೂರಾಮ್ ವಿನಾಯಕ ಗೋಡ್ಸೆ ಅವರ ಜನ್ಮದಿನವನ್ನು ಮಂಗಳೂರಿನಲ್ಲಿ ಆಚರಿಸಲಾಗಿದೆ.
ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಅಶ್ರಯದಲ್ಲಿ ಇದನ್ನು ಆಚರಿಸುವ ಮೂಲಕ ವಿವಾದ ಸೃಷ್ಟಿಸಲಾಗಿದೆ.
ಉಳ್ಳಾಲದಲ್ಲಿನ ಹಿಂದೂ ಮಹಾಸಭಾದ ಸದಸ್ಯರೊಬ್ಬರ ಮನೆಯಲ್ಲಿ ನಾಥೂರಾಮ್ ಗೋಡ್ಸೆ ಅವರ ಭಾವಚಿತ್ರಕ್ಕೆ ಪುಷ್ಪಅರ್ಚನೆ ಗೆೃಯುವ ಮೂಲಕ ಆಚರಿಸಲಾಗಿದ್ದು.

ಈ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ಎಲ್.ಕೆ ಸುವಣ೯, ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ, ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹಾಗೂ ಲೋಕೇಶ್ ಮತ್ತಿತ್ತರ ಕಾರ್ಯಕರ್ತರು ಭಾಗವಹಿಸಿದ್ದರು.