Connect with us

    FILM

    ಸಿನಿಮಾಕ್ಕೆ ಗುಡ್ ಬೈ ಹೇಳಿ ಕಾಡಿನ ಹಾದಿ ಹಿಡಿದ ಗ್ಲಾಮರ್ ಬ್ಯೂಟಿ ಪೂಜಾ ಹೆಗ್ಡೆ..!

    ಬೆಂಗಳೂರು : ಕರಾವಳಿ ಬೆಡಗಿ  ಗ್ಲಾಮರ್ ಬ್ಯೂಟಿ  ಪೂಜಾ ಹೆಗ್ಡೆ ಅವರು ತಮ್ಮ ಸಿನಿಮಾ ವೃತ್ತಿಯಿಂದ ವಿರಾಮ ತೆಗೆದುಕೊಂಡು ಪ್ರಕೃತಿಯತ್ತ ಹೆಜ್ಜೆ ಹಾಕಿದ್ದಾರೆ.

     

    ಸದ್ಯ ಸಿನಿಮಾಗಳ ಕೆಲಸಗಳಿಂದ ಪೂಜಾ ಕೊಂಚ ದೂರನೇ ಉಳಿದಿದ್ದಾರೆ. ಪೂಜಾ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುತ್ತಿರುವ ಕಾರಣ ಹತಾಶೆಯಾದ ಪೂಜಾ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಈ ಮಧ್ಯೆ ನಟಿ ವಿದೇಶಕ್ಕೆ ತೆರಳಿದ್ದು ಅಲ್ಲಿನ ಕಾಡುಗಳಲ್ಲಿ ಸುತ್ತಾಟ ನಡೆಸಿ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.

    ಶರ್ಟ್‌ ಮತ್ತು ಶಾರ್ಟ್‌ ಜೀನ್ಸ್‌ ಧರಿಸಿ ಕಾಡಿನ ಹಸಿರಿನ ಮಧ್ಯೆ ನಿಂತು ಪ್ರಕೃತಿಯನ್ನು ನೋಡಿ ಖುಷಿಪಟ್ಟಿರುವ ಚೆಂದದ ಫೋಟೋಗಳನ್ನು ಕೂಡ ಪೂಜಾ ಶೇರ್ ಮಾಡಿದ್ದಾರೆ. ಪೂಜಾ ಹೆಗ್ಡೆಯ ಸಿನಿಮಾಗಳ ವಿಚಾರಕ್ಕೆ ಬಂದ್ರೆ ನಟಿ ಶಾಹಿದ್ ಕಪೂರ್ ಜೊತೆ `ದೇವ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಪುತ್ರನ ಜೊತೆ ಸಿನಿಮಾ, ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರಕ್ಕೂ ಇವರೇ ನಾಯಕಿಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply