FILM
‘ಡಿ ಬಾಸ್’ ಗೆ ಬಿಗ್ ಶಾಕ್,ದರ್ಶನ್ ಪರ ವಾದಕ್ಕೆ ವಕೀಲರ ಹಿಂದೇಟು..!
ಬೆಂಗಳೂರು : ಡಿ ಬಾಸ್ ದರ್ಶನ್ ಅವರದ್ದು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲದ ಬಳಿ ಗ್ರಹಚಾರ ಕೆಟ್ಟಿದ್ದು ಒಂದರ ಹಿಂದೊದರಂತೆ ದರ್ಶನ್ ಗೆ ಸಂಕಷ್ಟ ಎದುರಾಗುತ್ತಲೆ ಇದ್ದು ಸದ್ಯಕ್ಕಂತು ದರ್ಶನ್ ಜೈಲಿನಿಂದ ಹೊರ ಬರುವುದು ಡೌಟ್ ಆಗಿಬಿಟ್ಟಿದೆ.
ಅತ್ತ ಜೈಲು ಪಾಲಾದ ಪತಿಯನ್ನು ಹೇಗಾದರು ಮಾಡಿ ಹೊರತರಬೇಕೆಂದು ದರ್ಶನ್ ಪತ್ನಿ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಮಾನಸಿಕ ಶಕ್ತಿಗೆ ಸಾಕಷ್ಟು ದೇವಸ್ಥಾನಗಳಿಗೆ ಸುತ್ತುತ್ತಿದ್ದಾರೆ. ದರ್ಶನ್ ಸಂಬಂಧಿಕರು ಸಹ ಇಲ್ಲಸಲ್ಲದ ದೇವರಿಗೆ ಹರಕೆ ಕಟ್ಕೊಂಡಿದ್ದಾರೆ. ಆದರೆ ಅದ್ಯೂಕೋ ದೇವರೇ ಮುನಿಸಿದಂತಿದ್ದು ಒಂದೇ ಒಂದು ತುತ್ತು ಮನೆಯೂಟವೂ ದರ್ಶನ್ ಗೆ ಸಿಗ್ತಿಲ್ಲ. ಮನೆ ಊಟದ ಭಾಗ್ಯ ಸಿಗುತ್ತಾ ಅಂತಾ ಕಾಯ್ತಿದ್ದ ದರ್ಶನ್ಗೆ ಜೈಲಿ ಊಟವೇ ಗತಿಯಾಗಿದೆ. ಈ ಮಧ್ಯೆ ದರ್ಶನ್ ಪರ ವಾದ ಮಾಡಲು ಖ್ಯಾತ ವಕೀಲರು ಹಿಂದೇಟು ಹಾಕಿದ್ದಾರೆ. ದರ್ಶನ್ ಪರ ವಾದ ಮಂಡಿಸೋದಕ್ಕೆ ಹಿರಿಯ ವಕೀಲರೇ ಸಿಗ್ತಿಲ್ಲವಂತೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಿರಿಯ ವಕೀಲ ಸಿ.ವಿ ನಾಗೇಶ್ ಮೊರೆ ಹೋಗಿದ್ದರು. ಆದರೆ, ನಾಗೇಶ್ ಅವರು ದರ್ಶನ್ ಕೇಸ್ನಲ್ಲಿ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳೇ ತಾಂತ್ರಿಕ ಹಾಗೂ ಮೆಡಿಕಲ್ ಸಾಕ್ಷ್ಯಗಳು ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದು ಇದೇ ಕಾರಣಕ್ಕೆ ದರ್ಶನ್ ಪರ ವಾದ ಮಾಡಲು ಲಾಯರ್ ಗಳು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನ ಪ್ರತಿ ಸಾಕ್ಷ್ಯದಲ್ಲೂ ದರ್ಶನ್ ಪಾತ್ರ ಇರೋದು ಬಹುತೇಕ ಖಾಯಂ ಆಗಿದೆ. ಹೀಗಾಗಿ ದರ್ಶನ್ ಕೇಸ್ ಕೈಗೆತ್ತಿಕೊಂಡರೆ ಹಿನ್ನೆಡೆ ಅನುಭವಿಸುವ ಆತಂಕ ವಕೀಲರಿಗೆ ಕಾಡ್ತಿದೆ ಆದ್ದರಿಂದ ವಕೀಲರು ಕೇಸಿಗೆ ಹಿಂದೇಟು ಹಾಕ್ತಿದ್ದು ದರ್ಶನ್ ಅವರಿಗೆ ಸದ್ಯಕ್ಕೆ ಜೈಲೆ ಗತಿಯಾಗಿದೆ.
You must be logged in to post a comment Login