LATEST NEWS
ಹಾರ್ನ್ ಮಾಡಿದರೂ ಸ್ಕೂಟರ್ ಗೆ ಅಡ್ಡ ಬಂದ ಕಿವುಡನನ್ನು ಕೊಲೆ ಮಾಡಿದ 16ರ ಬಾಲಕಿ
ಛತ್ತೀಸಗಡ್ ಜುಲೈ 24: ಹಾರ್ನ್ ಮಾಡಿದರೂ ರಸ್ತೆಯಲ್ಲಿ ಜಾಗ ಬಿಡಲಿಲ್ಲ ಎಂದು ಬಾಲಕಿಯೊಬ್ಬಳು ಕಿವುಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.
ಛತ್ತೀಸಗಡದ ರಾಜಧಾನಿ ರಾಯಪುರ್ದ ಕಂಕಾಲಿಪಾರಾ ಪ್ರದೇಶದ ಆಜಾದ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ನಲ್ಲಿ ಶಾಲೆಗೆ ಹೋಗುತ್ತಿದ್ದ ಮಂದಿರ್ ಅಸಾದ್ ಪ್ರದೇಶದ 16 ವರ್ಷದ ಬಾಲಕಿ ರಸ್ತೆಯಲ್ಲಿ ಅಡ್ಡ ಬಂದ ವ್ಯಕ್ತಿಗೆ ಹಾರ್ನ್ ಮಾಡಿದ್ದಳು. ಆದರೆ, ಆ ವ್ಯಕ್ತಿ ದೂರ ಸರಿಯದಿದ್ದರಿಂದ ಬ್ಯಾಗ್ನಲ್ಲಿದ್ದ ಚಾಕುವನ್ನು ತೆಗೆದು ಆತನ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾಳೆ. ಹತ್ಯೆಯಾದ 36 ವರ್ಷದ ವ್ಯಕ್ತಿ ಕಿವುಡ ಹಾಗೂ ಮೂಕನಾಗಿದ್ದ ಎಂದು ಎಸ್ಪಿ ಡಿ.ಸಿ ಪಟೇಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ಬಂಧಿಸಲಾಗಿದ್ದು ಸೋಮವಾರ ಬಾಲನ್ಯಾಯ ಮಂಡಳಿ ಮುಂದೆ ಅವಳನ್ನು ಹಾಜರು ಪಡಿಸಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.