BELTHANGADI
ಬೆಳ್ತಂಗಡಿ: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ
ಬೆಳ್ತಂಗಡಿ, ಜುಲೈ 24: ಮನೆಯಿಂದ ಪೇಟೆಗೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಲಾಯಿಲದ ಯುವಕನನ್ನು ಕಾರಿನಲ್ಲಿ ಬಂದ ತಂಡ ಅಪಹರಿಸಿ ಅಳದಂಗಡಿ ಸಮೀಪದ ಕೆದ್ದು ಎಂಬಲ್ಲಿರುವ ಶಾಲೆಗೆ ಕರೆದೊಯ್ದು ಹಲ್ಲೆಗೈದ ಘಟನೆ ಭಾನುವಾರ ನಡೆದಿದೆ.
ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಮೆಕ್ಯಾನಿಕ್ ನಿಶೇತ್(23)ಹಲ್ಲೆಗೊಳಗಾದ ಯುವಕ. ವಾಹನದಲ್ಲಿ ಬಂದ ಎಂಟು ಮಂದಿಯ ತಂಡ ಯುವಕನನ್ನು ಅಪಹರಿಸಿ, ಸವಣಾಲು ರಸ್ತೆ ಮೂಲಕ ಅಳದಂಗಡಿಯ ಕೆದ್ದು ಶಾಲೆ ಆಟದ ಮೈದಾನಕ್ಕೆ ಕರೆದೊಯ್ದು ಅಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆತನ ಮೊಬೈಲ್ ಫೋನ್ ಹಾಗೂ ಚಿನ್ನದ ಸರ ಕಸಿದಿದ್ದಾರೆ ಎನ್ನಲಾಗಿದೆ.
ಹಲ್ಲೆ ಮಾಹಿತಿ ತಿಳಿದ ನಿಶೇತ್ ಸ್ನೇಹಿತರು ಕೆದ್ದುವಿಗೆ ಹೋಗಿದ್ದು ಎರಡು ತಂಡದ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಫೇಸ್ಟುಕ್ ಯುವತಿಗೆ ಮೆಸೇಜ್ ಮಾಡಿದ್ದಾನೆ ಎಂಬ ವಿಚಾರಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ವೇಣೂರು ಠಾಣೆಯಲ್ಲಿ ಯುವಕನ ಅಪಹರಣ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ನಿಶೇತ್‌ನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
You must be logged in to post a comment Login