LATEST NEWS
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 266 ರೂ ಏರಿಕೆ..ಹೊಟೇಲ್ ತಿಂಡಿ ಇನ್ನು ದುಬಾರಿ…!!
ಬೆಂಗಳೂರು ನವೆಂಬರ್ 1: ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರಕಾರ ಮತ್ತೆ ಶಾಕ್ ನೀಡಿದ್ದು, ತಿಂಗಳ ಆರಂಭದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಜೊತೆ ವಾಣಿಜ್ಯ ಬಳಕೆಯ ಸಿಲೆಂಡರ್ ಬೆಲೆ ಕೂಡ ಏರಿಕೆಯಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಂದಿನಿಂದ 266 ರೂಪಾಯಿ ಹೆಚ್ಚಳವಾಗಿದ್ದು 19 ಕೆಜಿ ಸಿಲೆಂಡರ್ ಗೆ 2 ಸಾವಿರ ರೂಪಾಯಿ 50 ಪೈಸೆ ನೀಡಬೇಕು. ಈ ಹಿಂದೆ ಅದರ ಬೆಲೆ 1,734 ರೂಪಾಯಿಯಾಗಿತ್ತು. ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗಿಲ್ಲ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಹೊಟೇಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳಲ್ಲಿ ಸಹ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಲಾ 35 ಪೈಸೆ ಹೆಚ್ಚಳ ದಾಖಲಾಗಿದೆ. ನಿರಂತರ ಆರನೇ ದಿನವೂ ತೈಲ ದರ ಏರಿಕೆಯಾಗಿದ್ದು, ಗ್ರಾಹಕರು ಹೈರಾಣಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹೆಚ್ಚಳವೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ದರದ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹113.56 ಮತ್ತು ಡೀಸೆಲ್‌ಗೆ ₹104.50 ಇದೆ; ಹೈದರಾಬಾದ್‌ನಲ್ಲಿ ಪೆಟ್ರೋಲ್ ₹114.12 ಮತ್ತು ಡೀಸೆಲ್ ದರ ₹107.40 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ₹109.69 ಮತ್ತು ಡೀಸೆಲ್‌ಗೆ ₹98.42 ಇದೆ. ಮುಂಬೈನಲ್ಲಿ ಪೆಟ್ರೋಲ್ ₹115.50 ಮತ್ತು ಡೀಸೆಲ್ ₹106.62ಕ್ಕೆ ಮಾರಾಟವಾಗುತ್ತಿದೆ. ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಕ್ರಮವಾಗಿ ₹110.15 ಮತ್ತು ₹106.35, ಡೀಸೆಲ್ ದರ ಕ್ರಮವಾಗಿ ₹101.56 ಮತ್ತು ₹102.59 ನಿಗದಿಯಾಗಿದೆ.
ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹120 ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ ₹122.32 ಮತ್ತು ಡೀಸೆಲ್ ₹113.21 ತಲುಪಿದೆ. ತೈಲ ಸಾಗಣೆ ದರ ಮತ್ತು ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರ ವ್ಯತ್ಯಾಸ ದಾಖಲಾಗಿದೆ.