Connect with us

    LATEST NEWS

    ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ..ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದ ಜನಪ್ರತಿನಿಧಿಗಳು

    ಮಂಗಳೂರು ನವೆಂಬರ್ 1: ರಾಜ್ಯೋತ್ಸವ ಸಂಭ್ರಮದಲ್ಲಿ ಮಂಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದ್ದು, ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಿದಲ್ಲದೇ ರಾಷ್ಟ್ರಗೀತೆಯನ್ನು ಈ ಸಂದರ್ಭದಲ್ಲಿ ಹಾಡಿ ಅಗೌರವ ತೋರಿಸಲಾಗಿದೆ.


    ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಲ್ಪಟ್ಟಿತು. ಸಚಿವ ಅಂಗಾರ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಂತೆ ಜೊತೆಗಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ಧ್ವಜಕ್ಕೆ ವಂದನೆ ಸಲ್ಲಿಸಿದ್ದಾರೆ. ನಂತರ ರಾಷ್ಟ್ರ ಗೀತೆಯನ್ನು ಕೂಡ ಹಾಡಲಾಗಿದೆ.


    ಅಷ್ಟು ಹೊತ್ತು ಕೂಡ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಿದ್ದು ಅಲ್ಲಿದ್ದವರಿಗೆ ಅಲ್ಲಿವರೆಗೂ ಗೊತ್ತಿರಲಿಲ್ಲ, ಜನಪ್ರತಿನಿಧಿ ಹಾಗೂ ಉನ್ನತ ಅಧಿಕಾರಿಗಳಿಗೂ ಧ್ವಜ ತಲೆಕೆಳಗಾಗಿ ಹಾರಿದ್ದು ಗೊತ್ತಾಗಲೇ ಇಲ್ಲ. ನಂತರ ಅಧಿಕಾರಿಗಳಿಗೆ ಧ್ವಜ ತಲೆಕೆಳಗಾಗಿದ್ದನ್ನು ಗಮನಿಸಿ ಮತ್ತೆ ಕೆಳಗಿಳಿಸಿ ಸರಿಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply