Connect with us

  KARNATAKA

  ಗದಗ: ತೋಟದಲ್ಲಿ ಯುವಕನ ಮೇಲೆರಗಿದ ಚಿರತೆ : ಕೂದಲೆಳೆಯಲ್ಲಿ ಯುವಕ ಪಾರು..!

  ಗದಗ : ಚಿರತೆ ದಾಳಿಯಲ್ಲಿ ಯುವಕನೋರ್ವ ಕೂದಲೆಳೆಯಲ್ಲಿ ಪಾರಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಜೀಗೇರಿ ಗ್ರಾಮದಲ್ಲಿ ನಡೆದಿದೆ.

  ಇಲ್ಲಿನ ಜೀಗೇರಿ ಗ್ರಾಮದ ಉದಯ ಶರಣಪ್ಪ ನಿಡಶೇಸಿ (18) ಚಿರತೆ ದಾಳಿಗೆ ಒಳಗಾದ ಯುವಕನಾಗಿದ್ದು  ಚಿಕಿತ್ಸೆಗಾಗಿ ಆಸಪತ್ರೆಗೆ ದಾಖಲಿಸಲಾಗಿದೆ.  ಶರಣಪ್ಪ ಆವಾರಿ ಅವರ ಜಮೀನಿನಲ್ಲಿ ಬಾಳೆಗೊನೆ ಕತ್ತರಿಸುವಾಗ ಚಿರತೆ ದಾಳಿ ಮಾಡಿದೆ.  ಯುವಕನ ಎದೆಗೆ ಬಾಯಿ ಹಾಕಿ, ಮೈ ಹಾಗೂ ಬೆನ್ನಿನ ಮೇಲೆ ಉಗುರುಗಳಿಂದ ದಾಳಿ ಮಾಡಿದೆ.

  ಚಿರತೆ ದಾಳಿ ವೇಳೆ ಸ್ಥಳದಲ್ಲಿದ್ದ  4-5 ಜನ ಕಾರ್ಮಿಕರು  ಬೊಬ್ಬೆ ಹಾಕಿದಾಗ , ಭಯಗೊಂಡ  ಚಿರತೆ ಯುವಕನನ್ನು  ಬಿಟ್ಟು ಎಸ್ಕೇಪ್ ಆಗಿದೆ.  ಕೂಡಲೇ ಗಾಯಗೊಂಡ ಯುವಕನನ್ನು  ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ  ಗದಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ,

  ಗಾಯಾಳು  ಭೇಟಿ ಮಾಡಿ  ಉಪ ವಲಯ ಅರಣ್ಯಧಿಕಾರಿ ಪ್ರವೀಣಕುಮಾರ ಸಾಸ್ವಿಹಳ್ಳಿ ಆರೋಗ್ಯ ವಿಚಾರಿಸಿದ್ದಾರೆ.  ಜೀಗೇರಿ ಗ್ರಾಮದ ಯಲ್ಲಪ್ಪ ಕಾಡಾದ ಅವರ ಜಮೀನಿನಲ್ಲಿ 5 ದಿನದ ಹಿಂದೆಯೇ ಅರಣ್ಯ ಇಲಾಖೆ  ಬೋನ್ ಇ‌ಟ್ಟಿದ್ದರೂ ಚಿರತೆ ಅದಕ್ಕೆ ಬೀಳದೆ ಓಡಾಡುತ್ತಿದ್ದು ಗ್ರಾಮದ ಜನ ಭಯಭೀತರಾಗಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply