ಮನೆ ಮಾಳಿಗೆ ಕುಸಿದು ಮಕ್ಕಳು ಸೇರಿ ನಾಲ್ವರು ಭೀಕರ ಸಾವು

ಚಿತ್ರದುರ್ಗಾ, ಫೆಬ್ರವರಿ 09 :  ಮನೆಯ ಮಾಳಿಗೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಧಾರುಣ ಘಟನೆ ಚಿತ್ರದುರ್ಗಾದ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಸಂಭವಿಸಿದೆ. ತಾಯಿ ನಾಗರತ್ನಮ್ಮ (30), ಮಕ್ಕಳಾದ ಕೋಮಲ (2), ತೀರ್ಥವರ್ಧನ(4), ಯಶಸ್ವಿನಿ(5) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಚಂದ್ರಶೇಖರ್ ಹಾಗೂ ದೇವಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಳಿಗೆ ಮನೆಯು ತೀರಾ ಹಳೆಯದಾಗಿತ್ತು.

ರಾತ್ರಿ ಮಲಗಿದ ಬಳಿಕ ಈ ಅವಘಡ ಸಂಭವಿಸಿದೆ. ಪೊಲೀಸರು ಹಾಗೂ ತಾಲ್ಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Facebook Comments

comments