ಧರ್ಮಸ್ಥಳ ಮಂಜುನಾಥ ಸ್ವಾಮಿ ಜೊತೆ ಚೆಲ್ಲಾಟ ಆಡಿದ್ದಕ್ಕೆ ತಕ್ಕ ಶಾಸ್ತಿ ಆಗಿದೆ- ಎಚ್.ಡಿ ಕುಮಾರಸ್ವಾಮಿ

ಬೆಳ್ತಂಗಡಿ ಫೆಬ್ರವರಿ 9: ಧರ್ಮಸ್ಥಳ ಮಂಜುನಾಥ ಸ್ವಾಮಿ ಜೊತೆ ಚೆಲ್ಲಾಟ ಆಡಿದರೆ ಎನಾಗಬಹುದೆಂದು ನನಗೆ ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ 12 ವರ್ಷಗಳ ಹಿಂದಿನ ಘಟನೆಯನ್ನು ಇಂದು ನೆನಪಿಸಿಕೊಂಡಿದ್ದಾರೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಜ್ಜನದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಅಪಚಾರ ಎಸಗಿದ್ರೆ ಧರ್ಮಸ್ಥಳ ಮಂಜುನಾಥಸ್ವಾಮಿ ಬಿಡಲ್ಲ, ಕ್ಷೇತ್ರದಲ್ಲಿ ನನ್ನಿಂದ ಅಪಚಾರವಾಗಿದೆ. ರಾಜಕಾರಣದಲ್ಲಿ ಮಂಜುನಾಥನನ್ನು ಎಳೆದು ತಂದು ತಪ್ಪು ಮಾಡಿದ್ದೆ. ಆ ಬಳಿಕ ಮಂಜುನಾಥ ಸ್ವಾಮಿ ಜೊತೆ ಚೆಲ್ಲಾಟವಾಡಿದರೆ ಎನಾಗಬಹುದೆಂಬ ಅನುಭವವಾಗಿದೆ ಎಂದು ತಿಳಿಸಿದರು.

12 ವರ್ಷಗಳ ಹಿಂದೆ ಅಂದ್ರೆ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆಣೆ ಪ್ರಮಾಣ ಮಾಡಿದ್ದೆ. ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಅಲ್ಲದೇ ಯಡಿಯೂರಪ್ಪ ಅವರಿಗೂ ಶಿಕ್ಷೆಯಾಗಿದ್ದು, ಆ ಸಂದರ್ಭದಲ್ಲಿ ಅವರ ಸರ್ಕಾರ ಬಿದ್ದೋಗಿತ್ತು ಎಂದು ಹೇಳುವ ಮೂಲಕ ಹಳೆಯ ಘಟನೆಯನ್ನು ನೆನಪಿಸಿಕೊಂಡರು. ಅಲ್ಲದೆ ಆ ತಪ್ಪಿನ ನೋವು ಎಂದಿಗೂ ಮರೆತು ಹೋಗುವುದಿಲ್ಲ ಎಂದು ಹೇಳಿದರು.