ವಿಧಿಯಾಟಕ್ಕೆ ತುಂಬು ಗರ್ಭಿಣಿ ಬಲಿ: ತಮಿಳುನಾಡಿನಲ್ಲೊಂದು ಭೀಕರ ರಸ್ತೆ ಅಪಘಾತ

ಚೆನೈ, ಫೆಬ್ರವರಿ 09 :  ನಿಂತಿದ್ದ ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭೀಣಿ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ಮಹಿಳೆಯನ್ನು 28 ವರ್ಷದ ಸೋಫಿಯಾ ರಾಬಿನ್ ಎಂದು ಗುರುತ್ತಿಸಲಾಗಿದೆ. ಈಕೆ ಚೆಂಗಂಪೇಟೆಯ ಬಾಲಾಶ್ರಮದಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಸ್ ನಿಲ್ದಾಣದ ಬಳಿ ಸರ್ಕಾರಿ ಬಸ್ ಬಂದು ನಿಂತಿತ್ತು. ಈ ವೇಳೆ ಸೋಫಿಯಾ ಬಸ್ ಅನ್ನು ಹತ್ತಲು ಮುಂದಾಗಿದ್ದರು. ಆ ವೇಳೆ ಹಿಂಬದಿಯಿಂದ ಬಂದ ಲಾರಿ ಮೊದಲಿಗೆ ಬೈಕ್ ಗೆ ಗುದ್ದಿದ್ದು ಬೈಕ್ ಸವಾರ ಲಾರಿ ಕೆಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಸೋಫಿಯಾ ಮಾತ್ರ ಬಸ್ ಮತ್ತು ಲಾರಿ ನಡುವೆ ಸಿಲುಕಿದ್ದಾರೆ.
ಈ ವೇಳೆ ಅಲ್ಲಿದ್ದ ಜನರು ಲಾರಿಯನ್ನು ಹಿಂದಕ್ಕೆ ತೆಗೆಯುವಂತೆ ಕೂಗಿದ್ದಾರೆ. ಮೊದಲೇ ಗಾಬರಿಗೊಂಡಿದ್ದ ಲಾರಿ ಚಾಲಕ ಕೆಲ ಸೆಕೆಂಡ್ ಗಳ ಕಾಲ ಲಾರಿ ಹಿಂದಕ್ಕೆ ತೆಗೆಯದಿದ್ದರಿಂದ ಉಸಿರುಗಟ್ಟಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ…

Facebook Comments

comments