Connect with us

LATEST NEWS

ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ ಐಶ್ವರ್ಯ ರೈ ಮಗ ಮಂಗಳೂರಿನಲ್ಲಿ..!

ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ ಐಶ್ವರ್ಯ ರೈ ಮಗ ಮಂಗಳೂರಿನಲ್ಲಿ..!

ಮಂಗಳೂರು,ಡಿಸೆಂಬರ್ 29 :ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ, ಬಚ್ಚನ್ ಫ್ಯಾಮಿಲಿ ಸೊಸೆ ಐಶ್ವರ್ಯ ರೈ ಗೆ ಒಬ್ಬ ಮಗನಿದ್ದಾನೆ. ಇದು ಬರೀ ಗಾಸಿಪ್ ಅಲ್ಲ, ಆಂಧ್ರಪ್ರದೇಶ ಮೂಲದ 29 ವರ್ಷದ ಯುವಕನೊಬ್ಬ ತಾನು ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಮಗನೆಂದು ಹೇಳಿಕೊಂಡಿದ್ದಾನೆ.

ಸಂಗೀತ್ ಕುಮಾರ್ ಎನ್ನುವ ಯುವಕ ಮಂಗಳೂರಿಗೆ ಬಂದು ತಾನು ಐಶ್ವರ್ಯ ರೈ ಅವರ ಸ್ವಂತ ಮಗ ಎಂದು ಹೇಳಿಕೆ ನೀಡಿದ್ದಾನೆ. ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಆರಂಭದ ಎರಡು ವರ್ಷ ಐಶ್ವರ್ಯಾ ಕುಟುಂಬದ ಜೊತೆಗಿದ್ದೆ‌.

ಆನಂತರ ತನ್ನನ್ನು ತಂದೆಯೇ ಆಂಧ್ರ ಪ್ರದೇಶಕ್ಕೆ ತಂದು ಸಾಕಿದ್ದರು ಅಂತ ಆತ ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಈ ಬಗ್ಗೆ ತನ್ನಲ್ಲಿ ಯಾವುದೇ ದಾಖಲೆ ಇಲ್ಲ. ಐಶ್ವರ್ಯಾ ಕುಟುಂಬಸ್ಥರು ನೋಡಿದರೆ ಒಪ್ಪಿಕೊಳ್ಳುತ್ತಾರೆ ಎಂದೂ ಆತ ಹೇಳುತ್ತಿದ್ದಾನೆ. ತಾನು ಐಶ್ವರ್ಯಾ ಬಳಿ ಹೋಗಬೇಕು. ತುಳು ಚಿತ್ರವೊಂದರ ಶೂಟಿಂಗ್ ಕಾರ್ಯಕ್ಕೆಂದು ಮಂಗಳೂರಿಗೆ ಬಂದಿದ್ದೇನೆ. ಚೆನ್ನೈ ಯಲ್ಲಿ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದೂ ಅಂತಾ ಹೇಳಿಕೊಂಡಿದ್ದಾನೆ.

Share Information
Continue Reading
Advertisement