Connect with us

    LATEST NEWS

    ದೇಶದ ಪ್ರಥಮ ಸ್ಟಾರ್ಟ್ಅಪ್ ಇಂಕ್ಯುಬೇಶನ್ ಸೆಂಟರ್ ಉದ್ಘಾಟನೆ

    ದೇಶದ ಪ್ರಥಮ ಸ್ಟಾರ್ಟ್ಅಪ್ ಇಂಕ್ಯುಬೇಶನ್ ಸೆಂಟರ್ ಉದ್ಘಾಟನೆ

    ಮಂಗಳೂರು ಡಿಸೆಂಬರ್ 29: ದೇಶದ ಪ್ರಥಮ ಸ್ಟಾರ್ಟ್ಅಪ್  ಇಂಕ್ಯುಬೇಶನ್ ಸೆಂಟರ್ ನ್ನು ಮಂಗಳೂರಿನಲ್ಲಿ ಇಂದು ಉದ್ಘಾಟಿಸಲಾಯಿತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಕ್ಯುಬೇಶನ್ ಸೆಂಟರ್ ಗೆ ಚಾಲನೆ ನೀಡಿದರು.
    ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಿಂದ ಸುಮಾರು 1.50 ಕೋಟಿ ರೂಪಾಯಿಗಳನ್ನು ಈ ಸೆಂಟರ್ ಗಾಗಿ ನೀಡಿದ್ದು ಸ ಹೊಸ ಉದ್ಯಮ ಆರಂಭಿಸುವವರಿಗೆ ಅಗತ್ಯ ತರಬೇತಿ , ಮಾರ್ಗದರ್ಶನ ಮತ್ತು ಮೂಲ ಸೌಕರ್ಯವನ್ನು ಈ ಕೇಂದ್ರದ ಮೂಲಕ ನೀಡಲಾಗುತ್ತದೆ.


    ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸದರ ನಿಧಿಯನ್ನು ರಸ್ತೆ, ಕುಡಿಯುವ ನೀರು ಮೊದಲಾದ ಸೌಕರ್ಯಗಳಿಗೆ ಬಳಸಲಾಗುತ್ತದೆ. ಆದರೆ ಶಿಕ್ಷಣ ಕಾಶಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯ ವಿಧ್ಯಾವಂತರಿಗಾಗಿ ಈ ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ ವನ್ನು ತೆರೆಯಲಾಗಿದ್ದು. ಜಿಲ್ಲೆಯ ವಿಧ್ಯಾವಂತರು ಐಟಿಬಿಟಿಗಾಗಿ ಬೆಂಗಳೂರು ಅಥವಾ ಹೊರ ರಾಜ್ಯಗಳಿಗೆ ತೆರಳುವುದನ್ನು ತಪ್ಪಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
    ಈ ಸೆಂಟರ್ ಉದ್ಯಮ ಮಾಡಲು ಮುಂದಾಗುವವರಿಗೆ ಸೂಕ್ತ ತರಬೇತಿಯ ಜೊತೆಗೆ ಹಣಕಾಸಿವ ನೆರವು ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞ ವೃತ್ತಿಪರರಿಂದ ತರಭೇತಿ ಹಾಗೂ ಸಲಹೆಗಳನ್ನು ಒದಗಿಸುವಲ್ಲಿ ನಿರಂತರ ಚಟುವಟಿಕೆಗಳು ಇಲ್ಲಿ ನಡೆಯಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರ್ದೇಶನ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply