Connect with us

DAKSHINA KANNADA

ಕಾನೂನು ವ್ಯವಸ್ಥೆಯ ಲೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡ ಮಾಜಿ ಮುಖ್ಯಮಂತ್ರಿ ಡಿ‌.ವಿ.ಸದಾನಂದ ಗೌಡ

ಪುತ್ತೂರು, ಜುಲೈ 30: ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಕಾನೂನು ವ್ಯವಸ್ಥೆಯ ಲೋಪವನ್ನು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಡಿ‌.ವಿ.ಸದಾನಂದ ಗೌಡ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ರೀತಿಯ ಘಟನೆ ಆದಾಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದೆವು, ಆದರೆ ಇದೀಗ ಜನರ ಭಾವನೆಯ ಕಟ್ಟೆ ಒಡೆದಿದೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಸರಕಾರದ ವಿರುದ್ಧ ನಮ್ಮವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪೋಲೀಸರಿಗೆ ಫ್ರೀ ಹ್ಯಾಂಡ್ ಕೊಡುವ ಮೂಲಕ ಇಂಥ ಘಟನೆಯನ್ನು ತಡೆಯಬೇಕಿದೆ, ಪ್ರವೀಣ್ ಗೆ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ. ಈ ವಿಚಾರವನ್ನು ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು ಯಾಕೆ ಈ ರೀತಿಯ ಲೋಪ ಆಯಿತು ಎನ್ನುವುದು ತಿಳಿದಿಲ್ಲ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್.ಐ.ಎ ಗೆ ನೀಡಿರುವುದು ಉತ್ತಮ ಬೆಳವಣಿಗೆ, ಈ ಬಗ್ಗೆ ತ್ವರಿತ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವರನ್ನು ಒತ್ತಾಯಿಸಲಾಗುವುದು, ಈ ಸಂಬಂಧ ಕರ್ನಾಟಕದ ಸಂಸದರ ತಂಡ ಗೃಹ ಸಚಿವರನ್ನ ಭೇಟಿ ಮಾಡಲಿದ್ದೇವೆ, ಮಂಗಳವಾರ ಈ ಬಗ್ಗೆ ಸಮಯ ನಿಗದಿಪಡಿಸಲಾಗಿದೆ.

ಈ ಹಿಂದೆ ಎನ್.ಐ.ಎ ಗೆ ವಹಿಸಿದ ಪ್ರಕರಣಗಳು ತನಿಖೆಯಾಗಿಲ್ಲ ಎನ್ನುವ ಆರೋಪವಿದೆ, ಆದರೆ ಎನ್.ಐ.ಎ ಎಲ್ಲಾ ಪ್ರಕರಗಳನ್ನು ಸಂಪೂರ್ಣ ತನಿಖೆ ನಡೆಸುತ್ತದೆ. ರಾಜ್ಯದಲ್ಲೂ ಎನ್‌.ಐ.ಎ ಕೇಂದ್ರ ಸ್ಥಾಪನೆಯಾಗಲಿದೆ ಮತ್ತು ರಾಜ್ಯದ ಕಛೇರಿ ಮಂಗಳೂರಿನಲ್ಲೇ ಆಗಲಿದೆ ಈ ಬಗ್ಗೆ ಈಗಾಗಲೇ ಸ್ಥಳ ಪರಿಶೀಲನೆಯೂ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *