LATEST NEWS
ಹುಲಿ ಗಣತಿಗೆ ಹೋದ ಅರಣ್ಯ ರಕ್ಷಕಿ, ಹುಲಿ ದಾಳಿಗೆ ಬಲಿ; ಕರ್ತವ್ಯದಲ್ಲಿಯೇ ಸಾವಿಗೀಡಾದ ಫಾರೆಸ್ಟ್ ಗಾರ್ಡ್
ಮಹಾರಾಷ್ಟ್ರ, ನವೆಂಬರ್ 21: ವನ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವವರೇ ವನ್ಯಪ್ರಾಣಿಗೆ ಬಲಿಯಾದಂಥ ದುರಂತ ಪ್ರಕರಣ. ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ದುಮಾನೆ ಎಂಬಾಕೆ ಮೃತಪಟ್ಟವರು.
ಫಾರೆಸ್ಟ್ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ಇವರು ಅಖಿಲ ಭಾರತ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದರು. ಆ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಟಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಇವರು ಕರ್ತವ್ಯನಿರತರಾಗಿದ್ದರು.
ಹುಲಿ ಗಣತಿಯ ಕಾರ್ಯದಲ್ಲಿ ತೊಡಗಿದ್ದ ಫಾರೆಸ್ಟ್ ಗಾರ್ಡ್ ಮೇಲೆ ಹೆಣ್ಣು ಹುಲಿಯೊಂದು ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಸ್ವಾತಿ ದುಮಾನೆ ಕೊನೆಯುಸಿರೆಳೆದಿದ್ದಾರೆ.