Connect with us

LATEST NEWS

ಜಿಂಕೆ ಅಡ್ಡ ಬಂದು ಬೈಕ್ ಪಲ್ಟಿ : ಜಿಂಕೆ ಮೃತ್ಯು : ಸವಾರ ಗಂಭೀರ ಗಾಯ..!

ಕಾಪು: ಜಿಂಕೆಯೊಂದು ಬೈಕ್ ಗೆ ಅಡ್ಡಬಂದ ಕಾರಣ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಂಕರಪುರದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಜಿಂಕೆ ಸಾವನಪ್ಪಿದೆ.


ಗಾಯಗೊಂಡ ಬೈಕ್ ಸವಾರನನ್ನು ಬಂಟಕಲ್ ನಿವಾಸಿ ಹರ್ಷಿತ್(20) ಎಂದು ಗುರುತಿಸಲಾಗಿದ್ದು, ತಾಲೂಕಿನ ಶಂಕರಪುರದ ಸುಭಾಸ್‌ನಗರ ಎಂಬಲ್ಲಿಯ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ಗೆ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಹರ್ಷಿತ್ ಗಂಭೀರ ಗಾಯಗೊಂಡು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.