Connect with us

    KARNATAKA

    ಚಿಕ್ಕಬಳ್ಳಾಪುರದಲ್ಲಿ ವಾಮಾಚಾರದ ಮೊರೆ ಹೋದ ಅಭ್ಯರ್ಥಿಗಳು?

    ಚಿಕ್ಕಬಳ್ಳಾಪುರ, ಡಿಸೆಂಬರ್ 21:  ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಕಂಬಾಲಹಳ್ಳಿಯಲ್ಲಿ ಗೆಲುವು ಸಾಧಿಸಲು ವಾಮಾಚಾರ ಪೂಜೆ ಮಾಟ ಮಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಮತಗಟ್ಟೆ ಸ್ಥಾಪಿಸಿರುವ ಸರಕಾರಿ ಶಾಲೆಯ ಬಾಗಿಲು ಸೇರಿದಂತೆ ಕಟ್ಟಡದ ನಾಲ್ಕೂ ದಿಕ್ಕುಗಳಲ್ಲೂ ನಿಂಬೆ ಹಣ್ಣುಗಳನ್ನು ಇಟ್ಟು ಪೂಜೆ ಸಲ್ಲಿಸಿರುವುದು ಇದಕ್ಕೆ ಇಂಬು ನೀಡಿದೆ.

    ಕಾಂಗ್ರೆಸ್‌ ಬೆಂಬಲಿತ ಆಭ್ಯರ್ಥಿಯ ಕುಟುಂಬದವರು ಗೆಲುವನ್ನು ತಮ್ಮದಾಗಿಸಿಕೊಳ್ಳಲು ಈ ವಾಮಾಚರದ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನುವುದು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಮಸ್ಥರ ಆರೋಪವಾಗಿದೆ. ಚುನಾವಣೆಗೆ ನಿಂತ ದಾಸಮ್ಮನ ಪತಿ ವೆಂಕಟಪ್ಪ, ಮಗ ರಾಮಾಂಜಿ ಈ ವಾಮಾಚಾರ ಮಾಡಿದ್ದಾರೆ ಎಂದು ಗ್ರಾಮಸ್ಥರು ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಕಂಬಾಲಹಳ್ಳಿ, ದೊಡ್ಡಗುಮ್ಮನಹಳ್ಳಿ ಸೇರಿ ಮೂರು ಗ್ರಾಮಗಳ 450 ಮತದಾರರಿದ್ದು, ವಾಮಾಚಾರ ಘಟನೆಯಿಂದ ಭಯಭೀತರಾಗಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ವಾಮಾಚಾರ ನಡೆಸಿದ್ದು ಅಲ್ಲಿಗೆ ಬಂದರೆ ನಮಗೇನಾದರೂ ಕೇಡು ಉಂಟಾದರೆ, ಮತ ಹಾಕಲು ಬರೋದೆ ಇಲ್ಲ ಎಂದು ಹೇಳುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply