Connect with us

LATEST NEWS

ಷಷ್ಠಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ

ಉಡುಪಿ ಡಿಸೆಂಬರ್ 21 : ಖ್ಯಾತ ಕನ್ನಡದ ನಟ ನಿರ್ದೇಶದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಕುಟುಂಬದ ಮನೆಯಲ್ಲಿ ನಡೆದ ಕಾ ರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.


ಉಡುಪಿ ಜಿಲ್ಲೆ ಅಲೆವೂರು ಗ್ರಾಮದ ದೊಡ್ಡಮನೆ ರಕ್ಷಿತ್ ಶೆಟ್ಟಿಯ ಮೂಲಮನೆಯಾಗಿದ್ದು. ಷಷ್ಠಿಯ ಹಿನ್ನೆಲೆಯಲ್ಲಿ ಕುಟುಂಬದ ಮನೆಯಲ್ಲಿ ಪ್ರತೀ ವರ್ಷ ನಾಗ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಪಾಲ್ಗೊಂಡರು. ನಾಗ ಬನ ಸಮೀಪ ನೆಲದಲ್ಲಿ ಕುಳಿತು ಷಷ್ಠಿಯ ವಿಶೇಷ ಭೋಜನ ಮಾಡುವ ಸಂಪ್ರದಾಯ ಇದೆ. ನಟ ರಕ್ಷಿತ್ ಶೆಟ್ಟಿ ಕೂಡ ಕುಟುಂಬದವರ ಜೊತೆ ನೆಲದಲ್ಲಿ ಕೂತು ಊಟ ಮಾಡಿದರು.

ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದ್ದು, ಬ್ಯುಸಿ ಶೆಡ್ಯೂಲ್ ನಡುವೆಯೇ ಕುಟುಂಬದ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾದರು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೆಸರಿಗೆ ತಕ್ಕಂತೆ ಕುಟುಂಬದ ಸದಸ್ಯರ ಜೊತೆ ಸ್ಟಾರ್ ಎಂಬೂದನ್ನು ಮರೆತು ಬೆರೆತರು. ಮಕ್ಕಳ ಜೊತೆ ಫೋಟೋಗಳನ್ನು ತೆಗೆಸಿಕೊಂಡರು.

Facebook Comments

comments