LATEST NEWS
ನಾಟಕ ಕಲಾವಿದರಿಗೆ ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರಿಂದ ಕಿಟ್ ವಿತರಣೆ

ಉಡುಪಿ ಜೂನ್ 09: ಕೊರೊನಾ ಲಾಕ್ ಡೌನ್ ಸಂದರ್ಭ ಸಂಕಷ್ಟದಲ್ಲಿರುವ ನಾಟಕ ಕಲಾವಿದರಿಗೆ ಉಡುಪಿ ಜಿಲ್ಲೆಯ ನಾಟಕ ಕಲಾವಿದರ ಒಕ್ಕೂಟ ಇದರ ಅಧ್ಯಕ್ಷರಾಗಿರುವ ಸಮಾಜ ಸೇವಕ ಲೀಲಾಧರ ಶೆಟ್ಟಿ ಆಹಾರದ ಕಿಟ್ ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಕಲಾವಿದರ ಸಹಾಯಕ್ಕೆ ನಿಂತಿದ್ದಾರೆ.
ಉಡುಪಿ ಜಿಲ್ಲೆಯ ಹತ್ತು ನಾಟಕ ತಂಡದ ಸುಮಾರು 48 ಕಲಾವಿದರಿಗೆ ದಾನಿಗಳ ಸಹಕಾರ ಪಡೆಯದೆ ಸ್ವತ: ಕಿಟ್ ನ ಖರ್ಚು ವೆಚ್ಚಗಳನ್ನು ಭರಿಸಿ ಜಿಲ್ಲೆಯ ರಂಗಭೂಮಿ ತಂಡಗಳ ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಬದುಕಿನ ಎಲ್ಲಾ ಅವಕಾಶವನ್ನು ಕಳಕೊಂಡವರು ಕಲಾವಿದರು. ಸತತ ಎರಡು ವರ್ಷ ಆದಾಯವಿಲ್ಲದೆ ಕಳೆದ ಕಲಾವಿದರಿಗೆ ಒಕ್ಕೂಟದ ಅಧ್ಯಕ್ಷರು ಬೆಂಬಲವಾಗಿ ನಿಂತಿದ್ದಾರೆ. ಉತ್ತಮ ಮೌಲ್ಯದ ಕಿಟ್ ನೀಡುವುದರ ಮೂಲಕ ಒಂದಷ್ಟು ಆಶಾದಾಯಕ ಬದುಕಿಗೆ ಸಹಕರಿಸಿದ್ದಾರೆ.