LATEST NEWS
ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ದಕ್ಷಿಣ ಆಫ್ರಿಕಾ ಜೂನ್ 09: ಒಂದೇ ಸಲ ಹತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ದಕ್ಷಿಣ ಆಫ್ರಿಕಾದ ಮಹಿಳೆ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.
10 ಮಕ್ಕಳಲ್ಲಿ ಏಳು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು ಜನಿಸಿವೆ. 37 ವರ್ಷದ ಗೊಸಿಯಮೆ ಥಾಮರಾ ಸಿತೋಲ್ ಎಂಟು ಮಕ್ಕಳು ಜನಿಸಬಹುದೆಂದು ಊಹಿಸಿದ್ದರು. ಆದರೆ ಸೋಮವಾರ ರಾತ್ರಿ ಡೆಲಿವರಿಯಾದಾಗ ಹತ್ತು ಮಕ್ಕಳು ಜನಿಸಿದ್ದು ಕಂಡು ಗೊಸಿಯಮೆ ಮತ್ತು ಅವರ ಕುಟುಂಬಕ್ಕೆ ಅಚ್ಚರಿಯಾಗಿದೆ.
ಡೆಲಿವರಿ ಸಮಯಕ್ಕೆ ಏಳು ತಿಂಗಳು ಮತ್ತು ಏಳು ದಿನಗಳ ಗರ್ಭಿಣಿಯಾಗಿದ್ದರು. ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ತುಂಬಾ ಭಾವುಕನಾಗಿದ್ದೇನೆ ಎಂದು ಗೊಸಿಯಮೆ ಅವರ ಪತಿ ತೆಬೊಹೊ ಸೊಟೆಟ್ಸಿ ಮಾಧ್ಯಮಕ್ಕೆ ಹೇಳಿದ್ದಾರೆ.
You must be logged in to post a comment Login