LATEST NEWS
ಪುಡ್ ಡೆಲಿವರಿ ಗರ್ಲ್ ಈಗ ಮಂಗಳೂರು ಮಹಾನಗರಪಾಲಿಕೆಯ ಮಣ್ಣಗುಡ್ಡೆ ವಾರ್ಡ್ ನ ಕಾಂಗ್ರೇಸ್ ಅಭ್ಯರ್ಥಿ
ಪುಡ್ ಡೆಲಿವರಿ ಗರ್ಲ್ ಈಗ ಮಂಗಳೂರು ಮಹಾನಗರಪಾಲಿಕೆಯ ಮಣ್ಣಗುಡ್ಡೆ ವಾರ್ಡ್ ನ ಕಾಂಗ್ರೇಸ್ ಅಭ್ಯರ್ಥಿ
ಮಂಗಳೂರು ನವೆಂಬರ್ 2: ಜೀವನ ನಿರ್ವಹಣೆಗೆ ಆಹಾರ ವಿತರಣೆ ಮಾಡುವ ಪುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ ಹುಡುಗಿ ಇಂದು ಮಂಗಳೂರು ಮಹಾನಗರಪಾಲಿಕೆಗೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಒಂದು ಸಣ್ಣ ಗ್ರಾಮಪಂಚಾಯತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಲ್ಲಲು ಕೂಡ ದುಡ್ಡು, ಲಾಬಿಯೇ ಮುಖ್ಯವಾಗಿರುವ ಇಂದಿನ ದಿನಗಳಲ್ಲಿ ಜನಸಾಮಾನ್ಯರೂ ಕೂಡ ಚುನಾವಣೆಗೆ ನಿಲ್ಲಬಹುದು ಎನ್ನುವುದನ್ನು ಈಕೆ ತೋರಿಸಿಕೊಟ್ಟಿದ್ದಾಳೆ.
ಈಕೆ ಹೆಸರು ಮೇಘನಾ ದಾಸ್ ಬಿಎ ಪದವೀಧರೆಯಾಗಿರುವ ಮೇಘನಾ ಹುಡುಗಿಯರು ಮಾಡಲು ಕಷ್ಟಕರವಾದ ಪುಡ್ ಡೆಲಿವರಿ ಕೆಲಸಕ್ಕೆ ಸೇರಿ ಸೈ ಅನಿಸಿಕೊಂಡಿದ್ದರು. ಸ್ವತಃ ಕಷ್ಟಪಟ್ಟು ದುಡಿಯುವತ್ತ ಜನರ ಕಷ್ಟ ಅರಿತಿರುವ ಇವರು ಸಾಮಾನ್ಯ ಜನರ ಸೇವೆಗೆ ಅಡಿಯಿುಟ್ಟಿದ್ದಾರೆ.
ಮೇಘನಾದಾಸ್ ಗೆ ಕಾಂಗ್ರೇಸ್ ಪಕ್ಷ ಮಣ್ಣಗುಡ್ಡೆ ವಾರ್ಡ್ ಅಭ್ಯರ್ಥಿಯಾಗುವ ಅವಕಾಶ ನೀಡಿದೆ. ಗುರುವಾರವೇ ಅವರು ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮಪಂಚಾಯತ್ ಚುನಾವಣೆ ಗೆಲ್ಲಬೇಕಾದರೂ ಹಣದ ಮೇಲಾಟವೇ ಮುಖ್ಯವಾಗಿರುವ ಸಂದರ್ಭ, ಇದೆಲ್ಲದಕ್ಕೆ ಮೇಘನದಾಸ್ ಅವರು ತಾವು ಪುಡ್ ಡೆಲಿವರಿ ಸಂದರ್ಭದ ಗಳಿಕೆಯಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಉಳಿದ ಅಭ್ಯರ್ಥಿಗಳು ಗುಂಪುಕಟ್ಟಿ ಅದ್ದೂರಿಯಾಗಿ ಮನೆ ಮನೆಗೆ ತೆರಳುತ್ತಿದ್ದರೆ, ಇವರು ತಮ್ಮದೇ 3 – 4 ಹಿತೈಷಿಗಳನ್ನು ಕಟ್ಟಿಕೊಂಡು ಜನರ ಮನವೊಲಿಸುತ್ತಿದ್ದಾರೆ. ರಾಜಕೀಯಕ್ಕೆ ಬಂದರೂ ಮೇಘನಾದಾಸ್ ತಮ್ಮ ಪುಡ್ ಡೆಲಿವರಿ ಕೆಲಸ ಬಿಟ್ಟಿಲ್ಲ, ಈಗ ಪಾಲಿಕೆ ಟಿಕೆಟ್ ಸಿಕ್ಕಿರುವುದರಿಂದ ಪ್ರಚಾರ ಕಾರ್ಯಗಳಿಗಾಗಿ ಅನಿವಾರ್ಯವಾಗಿ 2 ವಾರ ರಜೆ ಹಾಕಿದ್ದು, ಗೆದ್ದರೆ ಜನರೊಂದಿಗೆ ಇದ್ದು ಅವರ ಕೆಲಸ ಮಾಡುತ್ತೇನೆ. ಸೋತರೆ ಮತ್ತೆ ಡೆಲಿವರಿ ಕೆಲಸ ಇದ್ದೇ ಇದೆ ಎನ್ನುತ್ತಾರೆ.