Connect with us

LATEST NEWS

ಕೇಂದ್ರ ಸರಕಾರದ ಎಲ್ಲಾ ಯೋಜನೆಗಳನ್ನು ರಾಜಕೀಯ ದೃಷ್ಠಿಕೋನದಿಂದ ನೋಡುವುದನ್ನು ಬಿಡಬೇಕು – ಉಪ ರಾಷ್ಟ್ರಪತಿ

ಕೇಂದ್ರ ಸರಕಾರದ ಎಲ್ಲಾ ಯೋಜನೆಗಳನ್ನು ರಾಜಕೀಯ ದೃಷ್ಠಿಕೋನದಿಂದ ನೋಡುವುದನ್ನು ಬಿಡಬೇಕು – ಉಪ ರಾಷ್ಟ್ರಪತಿ

ಮಂಗಳೂರು ನವೆಂಬರ್ 2: ಕೇಂದ್ರ ಸರಕಾರದ ಯೋಜನೆಗಳನ್ನು ರಾಜಕೀಯ ದೃಷ್ಠಿಕೋನದಿಂದ ನೋಡುವುದನ್ನು ಬಿಡುವ ಅನಿವಾರ್ಯತೆ ಇದ್ದು, ಯೋಗ ನಮ್ಮ ದೈಹಿಕ ಆರೋಗ್ಯಕ್ಕೆ ವಿನಹ ಪ್ರಧಾನಿ ಮೋದಿಗಾಗಿ ಅಲ್ಲ ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಮಂಗಳೂರಿನ ಸುರತ್ಕಲ್ ನ್ಯಾಷನಲ್ ಇನ್ಸಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಬೆಳ್ಳಿಹಬ್ಬ ಆಚರಣೆ ಹಾಗೂ 17 ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದ ಅವರು ದೇಶದೆಲ್ಲೆಡೆ 760 ಕ್ಕೂ ಮಿಕ್ಕದ ಭಾಷೆಗಳಿದ್ದು, ಎಲ್ಲಾ ಭಾಷೆಗಳಿಗೂ ಅದರದೇ ಆದ ಮಹತ್ವವಿದೆ. ಮಾತೃಭಾಷೆ ನೈಜ ದೃಷ್ಟಿಯಲ್ಲಿ ನೋಡುವಂತಾದರೆ, ಇತರ ಭಾಷೆಗಳು ಆ ವ್ಯಕ್ತಿಗೆ ಕನ್ನಡಕದ ಮೂಲಕ ನೋಡುವಂತಾಗಿದೆ ಎಂದು ಅವರು ವಿಶ್ಲೇಷಿಸಿದರು. ಮಾತೃಭಾಷೆಗೆ ಪ್ರಮುಖ ಆದ್ಯತೆ ನೀಡುವ ಕೆಲಸ ಆಗಬೇಕಿದೆ ಎಂದ ಅವರು ಭಾಷೆ ಮತ್ತು ಭಾವನೆ ಎರಡೂ ಒಟ್ಟೋಟ್ಟಿಗೆ ಸಾಗುತ್ತದೆ ಎಂದರು.

ನಲಂದಾ, ತಕ್ಷಶಿಲಾ ಮುಂತಾದ ಶಿಕ್ಷಣ ಸಂಸ್ಥೆಗಳ ಮೂಲಕವೇ ವಿಶ್ವಗುರು ಎನಿಸಿಕೊಂಡಿರುವ ಭಾರತದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತೆ ಭಾರತವನ್ನು ವಿಶ್ವಗುರು ಮಾಡುವತ್ತ ಮುಂದಡಿ ಇಡಬೇಕಿದೆ. ಕೇಂದ್ರ ಸರಕಾರ ಜಾರಿಗೆ ತಂದ ಡಿಜಿಟಲ್ ಇಂಡಿಯಾ, ಕ್ಲೀನ್ ಇಂಡಿಯಾ, ಭೇಟಿ ಬಚಾವೋ ಭೇಟಿ ಪಡಾವೋ, ಯೋಗ ಡೇ ಮೊದಲಾದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಯುವ ಜನತೆ ಈ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕಿದೆ. ಎಲ್ಲಾ ಯೋಜನೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಡುವ ಅನಿವಾರ್ಯತೆ ದೇಶದ ಮುಂದಿದೆ ಎಂದರು.

ವಿವಿಧ ವಿಷಯಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಉಪ ರಾಷ್ಟ್ರಪತಿಗಳು ಪ್ರಧಾನ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

comments