LATEST NEWS
ದಿಲ್ಲಿ ಪೈವ್ ಸ್ಟಾರ್ ಹೋಟೆಲ್‌ಗೆ 23 ಲಕ್ಷ ಟೋಪಿ ಇಟ್ಟವ ಅರೆಸ್ಟ್
ಮಂಗಳೂರು: ದೆಹಲಿಯ ಪೈವ್ ಸ್ಟಾರ್ ಹೊಟೆಲ್ ಒಂದರಲ್ಲಿ ಯುಎಇ ಅಧಿಕಾರಿ ಸೋಗಲ್ಲಿ 4 ತಿಂಗಳು ತಂಗಿ ಬಿಲ್ ಕಟ್ಟದೆ, ವಸ್ತುಗಳ ದೋಚಿ ಪರಾರಿ ಆಗಿದ್ದ ಆರೋಪಿಯನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಷರೀಫ್ ಎಂದು ಗುರುತಿಸಲಾಗಿದೆ.
ಈತನನ್ನು ಜನವರಿ 19ರಂದೇ ದಕ್ಷಿಣ ಕನ್ನಡದಲ್ಲಿ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನಂತರ ದಿಲ್ಲಿಗೆ ಕರೆದೊಯ್ಯಲಾಗಿದೆ. ಪಂಚತಾರಾ ಹೋಟೆಲ್ ಆಗಿರುವ ಲೀಲಾ ಪ್ಯಾಲೇಸ್ ಗೆ ಆ.1ರಂದು ತೆರಳಿದ್ದ ಮೊಹಮ್ಮದ್ ಷರೀಫ್ ತಾನು ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡಿದ್ದ. ಅಧಿಕಾರಿಗಳನ್ನು ನಂಬಿಸಲು ಯುಎಇ ಮೂಲದ ಪೌರತ್ವ ಚೀಟಿ ಹಾಗೂ ನಕಲಿ ಬಿಸಿನೆಸ್ ಕಾರ್ಡ್ ಗಳನ್ನು ನೀಡಿದ್ದ ಎಂದು ಹೇಳಲಾಗಿದೆ. ಸುಮಾರು 4 ತಿಂಗಳುಗಳ ಕಾಲ ತಂಗಿದ್ದಲ್ಲದೆ, 23 ಲಕ್ಷ ರು. ಬಿಲ್ ಕಟ್ಟದೆ ಹೋಟೆಲ್ ನ ಬೆಲೆಬಾಳುವ ವಸ್ತುಗ ಳೊಂದಿಗೆ ಪರಾರಿಯಾಗಿದ್ದವನ್ನು ಪುತ್ತೂರಿನಲ್ಲಿ ಬಂಧಿಸಲಾಗಿದೆ.