LATEST NEWS
ವಿಟ್ಲದ ಹನಿಟ್ರ್ಯಾಪ್ ಪ್ರಕರಣ – 5 ಜನ ಆರೋಪಿಗಳ ಬಂಧನ

ವಿಟ್ಲದ ಹನಿಟ್ರ್ಯಾಪ್ ಪ್ರಕರಣ – 5 ಜನ ಆರೋಪಿಗಳ ಬಂಧನ
ಬಂಟ್ವಾಳ ಅಕ್ಟೋಬರ್ 27: ಅಕ್ಟೋಬರ್ 21 ರಂದು ನಡೆದ ಕುಡ್ತಮುಗೇರು ಎಂಬಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಅಶ್ರಫ್ ಸಂಶೀರ್, ಜೈನುದ್ದೀನ್, ಮಹಮ್ಮದ್ ಇಕ್ಬಾಲ್, ಉಬೈದುಲ್ಲಾ, ಫರ್ಜಾನಾ ಇವರು ಬಂಧಿತ ಆರೋಪಿಗಳು,
ಬಂಧಿತ ಆರೋಪಿಗಳು ಮೂಡಬಿದಿರೆಯ ಜಲ್ಲಿ ಕ್ರಶರ್ ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಮ್ಮದ್ ಹನೀಫ್ ಗೆ ಪರ್ಜಾನಾ ಎಂಬ ಯುವತಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯಿಸಿದ್ದರು. ನಂತರ ಪರ್ಜಾನಾ ಹನೀಫ್ ಪರಿಚಯ ಬೆಳೆಸಿಕೊಳ್ಳುವಂತೆ ಮಾಡಿದ್ದರು. ಅಕ್ಟೋಬರ್ 20 ರಂದು ಪರ್ಜಾನಾ ಹನೀಫ್ ಗೆ ಪೋನ್ ಮಾಡಿ ತನಗೆ 5 ಸಾವಿರ ರೂಪಾಯಿ ಅರ್ಜೆಂಟ್ ಬೇಕಾಗಿದೆ ಎಂದು ವಿನಂತಿಸಿದ್ದಾಳೆ ಮತ್ತು ಮುಡಿಪುನಲ್ಲಿ ಮೀಟ್ ಆಗುತ್ತೇನೆ ಎಂದೂ ತಿಳಿಸಿದ್ದಾಳೆ. ಈ ಹಿನ್ನಲೆಯಲ್ಲಿ ಹನೀಫ್ ಹೆಂಡತಿ ಮತ್ತು ಮಗುವನ್ನು ಅತ್ತೆ ಮನೆಗೆ ಕಳುಹಿಸಿದ್ದ ಮಹಮ್ಮದ್ ಹನೀಫ್ ತನ್ನ ಶಿಫ್ಟ್ ಕಾರಿನೊಂದಿಗೆ ಮುಡಿಪಿಗೆ ಬಂದಿದ್ದಾನೆ.ಬಳಿಕ ಕುಡ್ತಮುಗೇರಿನಲ್ಲಿರುವ ತನ್ನ ಫ್ಲಾಟ್ ಗೆ ಆಕೆಯನ್ನು ಕರೆದೊಯ್ದಿದ್ದಾನೆ.

ಆದರೆ ಫ್ಲಾಟ್ ನ ಒಳಗೆ ಹೋಗುವ ಸಂದರ್ಭದಲ್ಲಿ ಟ್ರವೇರಾ ಕಾರಿನಲ್ಲಿ ಬಂದ ಐವರು ಯುವಕರು ಹಾಗೂ ಒರ್ವ ಯುವತಿಯಿದ್ದ ತಂಡ ತಂಡದ ಜೊತೆ ಸೇರಿಕೊಂಡ ಫರ್ಜಾನಾ ಹನೀಫ್ ನನ್ನು ರೂಮಿನೊಳಗೆ ತಳ್ಳಿದ್ದಾರೆ. ಬಳಿಕ ಫರ್ಜಾನಾ ಹಾಗೂ ತಂಡದಲ್ಲಿದ್ದ ಇನ್ನೋರ್ವ ಯುವತಿ ಬಟ್ಟೆ ಬಿಚ್ಚಿ, ಹನೀಫ್ ನ ಬಟ್ಟೆಯನ್ನೂ ಬಲವಂತವಾಗಿ ಬಿಚ್ಚಿದ್ದಾರೆ. ಬಳಿಕ ತಂಡ ಮೂವರ ನಗ್ನ ಫೋಟೋವನ್ನು ತೆಗೆದು ಹನೀಫ್ ನಲ್ಲಿ ಐದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ.ಹಣ ಇಲ್ಲ ಎಂದಾಗ ಫ್ಲಾಟ್ ನ ಗೋದ್ರೇಜ್ ನಲ್ಲಿದ್ದ 7 ಪವನ್ ಚಿನ್ನದ ಸರ, ಶಿಪ್ಟ್ ಕಾರು ಹಾಗೂ ಅದರ ದಾಖಲೆ ಪತ್ರಗಳನ್ನು ಎಗರಿಸಿ ತಂಡ ಪರಾರಿಯಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 6 ಮೊಬೈಲ್, 2 ಕಾರು, 8 ಗ್ರಾಂ ಚಿನ್ನ, 7.50 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.