ಮಂಗಳೂರು, ಜುಲೈ31 : ಎರಡು ತಿಂಗಳ ದೀರ್ಘ ವಿಶ್ರಾಂತಿಯಲ್ಲಿದ್ದ ಮೀನುಗಾರಿಕೆ ದೋಣಿಗಳು ನಾಳೆಯಿಂದ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯಲಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಟ್ರಾಲ್ ದೋಣಿಗಳಿದ್ದು ಮೀನುಗಾರಿಕಾ ಬಲೆ, ಮಂಜುಗೆಡ್ಡೆ, ಆಹಾರ ವಸ್ತು ಸೇರಿದಂತೆ ವಿವಿಧ ಪರಿಕಗಳೊಂದಿಗೆ ಭಾರಿ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ತಯಾರಿ ನಡೆಸುತ್ತಿವೆ ಕರಾವಳಿಯಲ್ಲಿ ಟ್ರಾಲ್ ಮತ್ತು ಪರ್ಸಿನ್ ದೋಣಿಗಳನ್ನು ಬಳಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ವಿಧಿಸಿದ್ದ ಆದೇಶದ ಅವಧಿ ಇಂದಿಗೆ ಪೂರ್ಣಗೊಳ್ಳಲಿದ್ದು ಹೊಸ ನಿರೀಕ್ಷೆ ಮತ್ತು ಹುಮ್ಮಸ್ಸಿನೊಂದಿಗೆ ಮೀನುಗಾರರು ಸಮುದ್ರಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015-16ರಲ್ಲಿ 1,51,458 ಟನ್ ಮತ್ತು 2016 -17ನೇ ಸಾಲಿನಲ್ಲಿ 1,52,573 ಟನ್ ಮೀನಿನ ಇಳುವರಿ ದೊರಕಿತ್ತು. ಉಡುಪಿ ಜಿಲ್ಲೆಯಲ್ಲಿ 2015-16ರಲ್ಲಿ 1,51,099ಟನ್ ಮೀನು ಲಭ್ಯವಾಗಿತ್ತು. ಆದರೆ, 2016-2017ರಲ್ಲಿ ಇಳುವರಿ ಪ್ರಮಾಣ 1,44,525 ಟನ್ ಗೆ ಕುಸಿದಿತ್ತು. ಕರಾವಳಿಯಲ್ಲಿ ಈ ಬಾರಿ ಹಿಂದಿಗಿಂತ ಉತ್ತಮ ಮಳೆಯಾಗಿದೆ, ಸಮುದ್ರದಲ್ಲಿ ವಾತಾವರಣ ಬಹುತೇಕ ತಿಳಿಯಾಗಿಯೇ ಇದೆ. ಈ ಹಿನ್ನೆಲೆಯಲ್ಲಿ  ಆಳ ಸಮುದ್ರದ ಮೀನುಗಾರಿಕೆ ನಡೆಸುವ ಹುಮ್ಮಸ್ಸಿನಲ್ಲಿರುವ ಮೀನುಗಾರರು, ಉತ್ತಮ ಇಳುವರಿಯ ಆಶಾಭಾವ ಹೊಂದಿದ್ದಾರೆ.
“ಸರ್ಕಾರದ ಆದೇಶದ ಪ್ರಕಾರ ಮಂಗಳವಾರದಿಂದ ಟ್ರಾಲ್ ದೋಣಿಗಳು ಮೀನುಗಾರಿಕೆಗೆ ತೆರಳಬಹುದು. ಆದರೆ ಸ್ಥಳೀಯ ಮೀನುಗಾರರೇ ಹೆಚ್ಚಾಗಿರುವ ಪರ್ಸೀನ್ ಬೋಟುಗಳು ಸಮುದ್ರ ಪೂಜೆಯ ಬಳಿಕ ಕಡಲಿಗೆ ಇಳಿಯಲಿವೆ.