LATEST NEWS
ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಸಾವು..!!

ಉಳ್ಳಾಲ, ಜನವರಿ 13:ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೊದಲ ಪ್ರಕರಣದಲ್ಲಿ ದೋಣಿ ಬಂಡೆಕಲ್ಲಿಗೆ ಢಿಕ್ಕಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಗಾಳಿಯ ರಭಸಕ್ಕೆ ಸಮುದ್ರದಲ್ಲಿ ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮೊಗವೀರಪಟ್ಣ ಸಮೀಪದ ಆಳ ಸಮುದ್ರದಲ್ಲಿ ನಡೆದಿದೆ. ಮೂಲತಃ ತಿರುವನಂತಪುರ ನಿವಾಸಿ, ಪ್ರಸಕ್ತ ಮೊಗವೀರಪಟ್ಣದಲ್ಲಿ ನೆಲೆಸಿದ್ದ ಮೈಕೆಲ್ (60) ಮೃತ ಪಟ್ಟವರು.

ಇನ್ನೊಂದು ಪ್ರಕರಣದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಮೀನಿಗೆ ಹಾಕಿದ್ದ ಬಲೆ ಎಳೆಯುವ ಸಂದರ್ಭ ಆಕಸ್ಮಿಕವಾಗಿ ಸಮುದ್ರಕ್ಕೆ ಜಾರಿ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ಸಮುದ್ರದಿಂದ ಕೆಲವು ಮಾರು ದೂರ ಈ ಘಟನೆ ನಡೆದಿದ್ದು, ಮೊಗವೀರಪಟ್ಣ ನಿವಾಸಿ ತುಳಸೀರಾಮ್ (62) ಮೃತಪಟ್ಟ ಮೀನುಗಾರ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ